ಕುಮಟಾ : ಕರ್ನಾಟಕ ಎಲ್ಲ ಭಾಷೆಗಳ ಬೀಡು.ಹೀಗಾಗಿ ನಾವು ಭಾಷಾ ಸಹಿಷ್ಣುಗಳು. ಆದರೆ ಕನ್ನಡ ಮಾತೃ ಭಾಷೆ ಸದಾ ನಮ್ಮದಾಗಿರಲಿ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ . ಕುಮಟಾ ಕನ್ನಡ ಸಂಘ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ಹಾಗೂ ಗಡಿನಾಡು ಕನ್ನಡಿಗರಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ರಾಜ್ಯಗಳಲ್ಲಿ ಎಲ್ಲ ಧರ್ಮದವರು ತಮ್ಮ ಮಾತೃ ಭಾಷೆಯನ್ನು ಬಳಸುತ್ತಾರೆ. ಆದರೆ ಕರ್ನಾಟಕದಲ್ಲಿ ಭಾಷಾ ವೈವಿಧ್ಯತೆ ಕಾಣಬಹುದು. ಕನ್ನಡದ ನೆಲ,ಜಲ ಉಳಿಸಿ ಬೆಳೆಸಲು ಎಲ್ಲ ಕನ್ನಡದ ಕಂಪು ಪಸರಿಸಬೇಕು. ಕನ್ನಡದ ಬಗ್ಗೆ ಹೋರಾಡು ವರು ನಿಸ್ವಾರ್ಥಿಗಳಾಗಿರುತ್ತಾರೆ. ಹೀಗಾಗಿ ಅವರ ಬಗ್ಗೆ ಅಭಿಮಾನವಿದೆ ಎಂದರು.
ಗಡಿನಾಡ ಕನ್ನಡತಿ ಕಾಸರಗೋಡಿನ ಡಾ. ವಾಣಿಶ್ರೀ - ಮಾತನಾಡಿ, ಗಡಿನಾಡಿನಲ್ಲಿ ಹರಿಯುವ ಮಲಯಾಳಿಗಳ ಪ್ರವಾಹದ ವಿರುದ್ಧ ಈಜಾಡಿ ಕನ್ನಡ ನದಿಯ ದಡ ಕಾಣಬೇಕಾಗಿದೆ. ಗಡಿಯಲ್ಲಿ ಕನ್ನಡದ ಮೇಲೆ ದಾಳಿ, ದಬ್ಬಾಳಿಕೆಗಳು ನಿರಂತರ ನಡೆಯು ತ್ತಿರುತ್ತವೆ. ಗಡಿನಾಡಿನಲ್ಲಿ ಕನ್ನಡಿಗರು ಮಲಯಾಳಿ ಭಾಷೆ ಮಾತಾಡಿದರೆ ಮಾತ್ರ ಉದ್ಯೋಗದ ಅವಕಾಶ ಲಭಿಸುತ್ತದೆ. ಗಡಿನಾಡು ಕನ್ನಡಮಯವಾಗಿಸಲು ಸರ್ಕಾರ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಅವರು ಮನವಿ ಮಾಡಿದರು.
ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸುಬ್ರಾಯ ವಾಳ್ಕೆ ಮಾತನಾಡಿ ಭಾಷೆಯ ಆಸಕ್ತಿ, ಅದರ ಆಳಕ್ಕೆ ಕೊಂಡಯ್ಯುತ್ತದೆ. ಆಗ ಮಾತ್ರ ಭಾಷೆಯ ಮೇಲೆ ಪ್ರಭುತ್ವ ಸಾಧ್ಯ. ರಾಜ್ಯದ ಗಡಿ ಭಾಗಗಳಲ್ಲಿ ಭಾಷಾ ಸಮಸ್ಯೆಯನ್ನು ಬಗೆ ಹರಿಸಲು ಸರ್ಕಾರಗಳಿಗೆ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಸಾಹಿತ್ಯ ಬೆಳೆದರೆ ಭಾಷೆಯ ಬೆಳವಣಿಗೆಯಾಗುತ್ತದೆ ಕುಮಟಾ ಕನ್ನಡ ಸಂಘ ಕನ್ನಡಕ್ಕಾಗಿ ಶ್ರಮ ಪಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಡಾ. ವಾಣಿಶ್ರೀ ಕಾಸರಗೋಡ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಉಪನ್ಯಾಸಕ ಡಾ. ಮಂಜುನಾಥ ಅಂಬಿಗ ಉದ್ದಿಮೆದಾರ ಸುಬ್ರಾಯ ವಾಳ್ಕೆ ಇವರನ್ನು ಕನ್ನಡ ಸಂಘದಿಂದ ಗೌರವಿಸಲಾಯಿತು.
ಪ್ರಾಚಾರ್ಯೆ ವಿಜಯಾ ನಾಯ್ಕ, ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಘದ ಅಧ್ಯಕ್ಷ
ಸದಾನಂದ ದೇಶಭಂಡಾರಿ ಗೌರವ ಸಮರ್ಪಿಸಿದರು. ಶಿವಲೀಲಾ ಹುಣಸಗಿ ಯಲ್ಲಾಪುರ, ಮನೆ, ಮನೆಗಳಲ್ಲಿ ಕನ್ನಡ ಆಡುಭಾಷೆಯುಗಲಿ, - ಸಾವಿತ್ರಿ ಮಾಸ್ಕೇರಿ ಕನ್ನಡದ ರಕ್ಷಣೆ ಎಲ್ಲರ ಜವಾಬ್ದಾರಿ ಹಳಿಯಾಳದ ಸುಮಾ ಹಡಪದ ನೆಲ ಜಲ ಭಾಷೆ ಉಳಿಸಲು ಕನ್ನಡಿರು ಒಂದಾಗಬೇಕು. ಎಂಬ ವಿಷಯಗಳನ್ನು ಮಂಡಿಸಿದರು. ಯುವ ಕವಿಗಳಿಂದ ನಡೆದ ಕವಿಗೋಷ್ಠಿ ನಡೆಯಿತು. ಶ್ರೀದೇವಿ ಕೆರೆಮನೆ ಅಧ್ಯಕ್ಷತ ವಹಿಸಿದ್ದರು. ಡಾ. ಶ್ರೀಧರ ಗೌಡ ಉಪ್ಪಿನಗಣಪತಿ ಯುವ ಕವಿಗಳಿಗೆ ಭರವಣಿಗೆ ನಿರಂತರವಾಗಿರಲಿ ಎಂದು ಕಿವಿಮಾತು ಹೇಳಿದರು.
ಸುರೇಖಾ ವಾರೆಕರ್, ಶಿವಯ್ಯ ಹರಿಕಾಂತ, ರಾಘವೇಂದ್ರ ಪಟಗಾರ. ಮಂಜು ದಿವಗಿ, ಉದಯ ಭಟ್, ಜಿ ಎಲ್ ನಾಯ್ಕ, ನಾಗಪ್ಪ ಮುಕ್ರಿ, ರಾಜು ಶೇಟ್,ಪ್ರದ ಕಾಲೇಜಿನ ಕನ್ನಡ ಉಪನ್ಯಾಸಕ ಮೂರ್ತಿ ಅಯ್ ಆರ್ ನಿರ್ವಹಿಸಿದರು. ಮಂಗಲದಾಸ ನಾಯ್ಕ ಪ್ರಸ್ತಾವಿಕ ಮಾತನಾಡಿದರು, ದಯಾನಂದ ದೇಶಭಂಡಾರಿ ಸ್ವಾಗತಿಸಿದರು. ಬಾಬು ನಾಯ್ಕ ವಂದಿಸಿದರು, ಶಿಕ್ಷಕ ಸುಧೀಶ ನಾಯ್ಕ ನಿರೂಪಿಸಿದರು.
ಸಂಜೆ ಕವಿಕಾವ್ಯಧಾರೆ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. 35ಕ್ಕೂ ಹೆಚ್ಚು ಯುವ ಕವಿಗಳು ಭಾಗವಹಿಸಿದ್ದರು. ವಿಜೇತ ಯುವ ಕವಿಗಳಿಗೆ ನಗದು ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.