ಕುಮಟಾ:ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ 75ನೇ ಅಮೃತ ಮಹೋತ್ಸವವನ್ನು ಪಿ.ಎಸ್.ಐ ರೇವತಿ ಅವರಿಂದ ಧ್ವಜಾರೋಹಣವನ್ನು ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪಿಐ ರೇವತಿ ಹಾಗೂ ಅತಿಥಿಗಳಾಗಿ ಭೂಸೇನೆಯ ಕರಾವಳಿ ತೀರದ ಮಾಜಿ ಕರ್ನಲ್ ಶ್ರೀ ಅನಂತ ರಾಮದಾಸ ಮಾಸೂರಕರ ಅವರು ವಹಿಸಿಕೊಂಡಿದ್ದರು.
ಸಮಾರಂಭದ ಮೊದಲಿಗೆ ಮಾಜಿ ಕರ್ನಲ್ ಅನಂತ ರಾಮದಾಸ ಮಾಸೂರಕರವರಿಂದ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡುವುದರ ಮೂಲಕ ಮಾಜಿ ಸೈನಿಕರನ್ನು ಗೌರವಿಸಲಾಯಿತು.ನಂತರ ಪಿಐ ರೇವತಿ ಅವರಿಗೆ ಕೇಂದ್ರ ಕಚೇರಿ ಮಲ್ಪೆಯಿಂದ ಎಸ್.ಪಿ.ಸಾಹೇಬರಿಂದ ಬಂದಿರುವ ಶ್ಲಾಘನೀಯ ಪತ್ರವನ್ನು ಮತ್ತು ನೆನಪಿನ ಕಾಣಿಕೆ ನೀಡುವುದರ ಮೂಲಕ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಿದರು.
ಈ ಸಂದರ್ಭದಲ್ಲಿ ಅಳ್ವೆ ದಂಡೆಯಿಂದ ಕಡೆಕೋಡಿಯ ವರೆಗೆ ಬೀಚ್ ವಾಕ್ ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.