ಕುಮಟಾ: 75ನೇ ವರ್ಷದ ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಕಾರ್ಯಕ್ರಮವನ್ನು ಡಿ.ಜೆ.ವಿ.ಎಸ್ ಪ್ರೌಢಶಾಲೆ ದಿವಗಿಯಲ್ಲಿ ಆಚರಿಸಲಾಯಿತು.
ಧ್ವಜಾರೋಹಣವನ್ನು ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೇ ಯವರು ನೆರವೇರಿಸಿದ ಅವರು ನಮ್ಮ ದೇಶವು ಅಭಿವೃದ್ದಿ ಹೊಂದುತ್ತಿರುವ ದೇಶವಾಗಿದ್ದು, ವಿವಿಧ ಕ್ಷೇತ್ರದಲ್ಲಿ ನಮ್ಮ ದೇಶವು ಸಾಧನೆ ಮಾಡುತ್ತಿದೆ. ವಿದ್ಯಾರ್ಥಿಗಳು, ಉತ್ತಮವಾಗಿ ಶಿಕ್ಷಣವನ್ನು ಪಡೆದು, ಉತ್ತಮ ಸಾಧನೆ ಮಾಡಿ ಎಂದ ಅವರು ಶಾಲಾ ವತಿಯಿಂದ ನಡೆಯುವ ವಲಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲು ಅಗತ್ಯವಾದ ಉಪಹಾರ ಮತ್ತು ಭೋಜನ ವ್ಯವಸ್ಥೆಯ ಸಂಪೂರ್ಣ ಖರ್ಚು ವೆಚ್ಚವನ್ನು ನಿರ್ವಹಿಸುವುದಾಗಿ ಘೋಷಿಸಿದರು.
೧೯೯೭ - ೯೮ ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದ ಆಯೋಜನೆಗೆ ಅಗತ್ಯವಿರುವ ಪಾರಿತೋಷಕ ಮತ್ತು ಮೆಡಲ್ ಗಳನ್ನು ಶಾಲೆಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಡಿ.ಜೆ.ವಿ.ಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಯವರಾದ ಮೋಹನ ಕೆ. ದೇಶ ಭಂಡಾರಿಯವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತಾನಾಡಿದರು
ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ದಯಾನಂದ. ಎನ್. ದೇಶಭಂಡಾರಿ, ವಿವೇಕ.ಆರ್.ಭಂಡಾರಿ , ಅಶೋಕ.ಎನ್.ದೇಶಭಂಡಾರಿ , ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸಂತೋಷ್ ಅಂಬಿಗ, ವಿನಾಯಕ ದೇಶಭಂಡಾರಿ, ಸಂದೀಪ.ಐ.ಅಂಬಿಗ, ಗಣೇಶ.ವಿ .ಅಂಬಿಗ, ದರ್ಶನ ಅಂಬಿಗ, ಪ್ರೌಢಶಾಲೆಯ ಶಿಕ್ಷಕರು ಹಾಗೂ ಶಿಕ್ಷಕಿಯರು, ಬೋಧಕೇತರ ಸಿಬ್ಬಂದಿಗಳು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.