ಕುಮಟಾ: ತಾಲೂಕಿನ ಅಘನಾಶಿನಿ- ತದಡಿ ಎರಡು ಬದಿಯಲ್ಲಿ ಜಟ್ಟಿ ಹಾಗೂ ರಸ್ತೆ ನಿರ್ಮಾಣಕ್ಕೆ 20ಕೋಟಿ ರೂ ಮಂಜೂರಿಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಬಿಜೆಪಿ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಈಗಾಗಲೇ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಯೂ ಪ್ರಾರಂಭಗೊಳ್ಳಲಿದೆ ಎಂದರು.
ನೆರೆಯಿಂದ ಹಾಣಿಯಾದ ಮನೆಗಳಿಗೆ ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ಪರಿಹಾರ ಸಿಗದಿದ್ದಲ್ಲಿ ತಾಲೂಕಾಡಳಿತವನ್ನು ಅಥವಾ ನನನ್ನ ಸಂಪರ್ಕಿಸಿದರೆ ಪರಿಹಾರ ಸಿಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಅ.13 ರಿಂದಲೇ ಎಲ್ಲ ಮನೆಗಳಲ್ಲೂ ರಾಷ್ಟ್ರ ಧ್ವಜ ಹಾರಾಡುವಂತಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ಮಾಹಿತಿ, ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಎಂದರು.
ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಮಾತನಾಡಿ ಎಲ್ಲ ಭಾರತೀಯರೂ ಸೇರಿ ರಾಷ್ಟ್ರಾಭಿಮಾನವನ್ನು ಮರೆಯುವುದು ಹರ್ ಘರ್ ತಿರಂಗಾ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಆರ.12 ರಂದು ಬೆಳಿಗ್ಗೆ 10 ಗಂಟೆಗೆ ಕುಮಟಾ ಪಟ್ಟಣದಲ್ಲಿ ತಿರಂಗಾ ಬೈಕ್ ರ‍್ಯಾಲಿ ನಡೆಯಲಿದೆ.13 ರ ಬೆಳಿಗ್ಗೆ 8 ಗಂಟೆಗೆ ಎಲ್ಲ ಮನೆಗಳ ಮೇಲೂ ರಾಷ್ಟ್ರದ್ವಜ ಹಾರಾಡಬೇಕು ಆ. 15ರ ಸಂಜೆ ಧ್ವಜವನ್ನು ಇಳಿಸಿ,ಅದನ್ನು ಸರಿಯಾಗಿ ಮನೆಯಲ್ಲಿ ಇಟ್ಟುಕೊಳ್ಳುವಂತಾಗಬೇಕು ರಾಷ್ಟ್ರ ಧ್ವಜಕ್ಕೆ ಯಾವುದೇ ಅಪಮಾನವಾಗದಂತೆ ನೋಡಿಕೊಳ್ಳುವುದು ಪ್ರತಿಯೊರ್ವ ಭಾರತೀಯರ ಕರ್ತವ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪ್ರಶಾಂತ ನಾಯ್ಕ, ಚೇತಶ ಶಾನಭಾಗ, ಎಂ.ಜಿ.ಭಟ್, ಜಿ.ಎಸ್.ಗುನಗಾ, ವಿನಾಯಕ ನಾಯ್ಕ, ಡಾ.ಜಿ.ಜಿ ಹೆಗಡೆ, ವಿಶ್ವನಾಥ ನಾಯಕ, ದಿವಾಕರ ನಾಯ್ಕ, ಬಿ.ಡಿ.ಪಟಗಾರ ಹಾಗೂ ಇತರರು ಹಾಜರಿದ್ದರು.