ಕುಮಟಾ:ಸುಲಭ ಸೇವಾ ಸಂಸ್ಥೆಯ ಅಡಿಯಲ್ಲಿ ರಚನೆಯಾದ ನಾಗಶ್ರೀ ಸುಲಭ ಜೇ.ಎಲ್.ಜಿ ಹಿರೇಮಠ,ಕಾಸರಕೋಡ ಇವರಿಗೆ ಮೀನು ವ್ಯಾಪಾರಕ್ಕಾಗಿ ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ಕುಮಟಾದಿಂದ ಸಾಲ ಸೌಲಭ್ಯ ಒದಗಿಸಲಾಯಿತು.
ಸುಲಭ ಸೇವಾ ಸಂಸ್ಥೆಯು ಬಡವರಿಗೆ ಬದುಕನ್ನ ಕಟ್ಟಿಕೊಳ್ಳಲು ಕೌಶಲ್ಯ ಆಧಾರಿತ ತರಬೇತಿ ನೀಡುವುದರ ಜೊತೆಗೆ ಉದ್ಯೋಗ ಆರಂಭಿಸಲು ಸಾಲದ ವ್ಯವಸ್ಥೆಯನ್ನು ಒದಗಿಸುತ್ತಿದೆ." ಎಂದು ಸಂಸ್ಥೆಯ ಮುಖ್ಯಸ್ಥರಾದ ದಿವಾಕರ ಅಘನಾಶಿನಿ ಸಾಲ ವಿತರಿಸಿ ಮಾತನಾಡಿದರು. ಸಾಲ ಮರುಪಾವತಿ ಕುರಿತಾಗಿ ದಾಖಲಾತಿ ನಿರ್ವಹಣೆ ಬಗ್ಗೆ ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ವ್ಯವಸ್ಥಾಪಕರಾದ ಪ್ರೀತಿ ಗೌಡ ಮಾಹಿತಿ ನೀಡಿದರು, ಸಿಬ್ಬಂದಿ ಚೇತನ ಆಚಾರಿ . ಸುಲಭ ಸಹಾಯಕಿ ಹರ್ಷ ದೇಶಭಂಡಾರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.