ಕುಮಟಾ: ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯದ ಸಭೆ ಕುಮಟಾ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಒಟ್ಟು 12 ಗ್ರಾ.ಪಂ ಸದಸ್ಯರುಗಳಿದ್ದು, ಅವಿಶ್ವಾಸ ಮಂಡನೆ ವೇಳೆ 9 ಸದಸ್ಯರು ಹಾಜರಿದ್ದು, ನಿಲುವಳಿ ವಿರುದ್ದ ಕೈ ಎತ್ತಿ ಸೂಚಿಸಲು ತಿಳಿಸಿದಾಗ 9 ಜನರು ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯದ ಪರವಾಗಿ ಕೈ ಎತ್ತುವ ಮೂಲಕ ಮತಚಲಾಯಿಸಿದ್ದಾರೆ. ಇಬ್ಬರು ಸದಸ್ಯರು ಮತ್ತು ಅಧ್ಯಕ್ಷರಾದ ಕುಸುಮಾ ಪಡ್ತಿ ಸಭೆಯಲ್ಲಿ ಗೈರಾಗಿದ್ದರು. ಕಳೆದ ಒಂದೂವರೆ ವರ್ಷದಿಂದ ಇದ್ದ ಆಡಳಿತ ಕೊನೆಗೊಂಡಿದ್ದು, ಮುಂದಿನ ಬೆಳವಣಿಗೆಯ ಆಯ್ಕೆ ಕುತೂಹಲ ಮೂಡಿಸಿದೆ.
ಅವಿಶ್ವಾಸ ಗೊತ್ತುವಳಿಗೆ ಕಾರಣ
ಗ್ರಾ.ಪಂ ಅಧ್ಯಕ್ಷರು ಸದಸ್ಯರನ್ನು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಅಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲವಾಗಿದ್ದು, ಕೆಲವು ಸಂಧರ್ಭದಲ್ಲಿ ಸದಸ್ಯರಿಗೆ ಅಗೌರವ ತೋರಿಸಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.