ಕುಮಟಾ: ಜುಲೈ 13 ರಿಂದ 60 ದಿನಗಳವರೆಗೆ ಗೋಕರ್ಣದ ಅಶೋಕೆಯಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ 29 ನೇ ಚಾತುರ್ಮಾಸ ನಡೆಯಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಕುಮಟಾ ಪರಿವೀಕ್ಷಣಾ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಈ ಚಾತುರ್ಮಾಸ ಕಾರ್ಯಕ್ರಮಕ್ಕೆ ರಾಜ್ಯ, ರಾಷ್ಟç ನಾಯಕರು ಆಗಮಿಸಲಿದ್ದಾರೆ. ಹೀಗಾಗಿ ಅಶೋಕೆಯಲ್ಲಿ ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದೇನೆ. ಚಾತುರ್ಮಾಸಕ್ಕಾಗಿ ಬರುವ ಭಕ್ತರಿಗೆ ಸುವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸೇವಾ ಸಮಿತಿಯ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪ ಮಾತನಾಡಿ, ಜುಲೈ 12 ರಂದು ಮೂಲಸ್ಥಾನವಾದ ಹೈಗುಂದದ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ದೀಪ ಜ್ಯೋತಿ ಕಾರ್ಯಕ್ರಮ ನಡೆಯಲಿದೆ. ನಂತರ ಅಶೋಕೆಯಲ್ಲಿ ಭಕ್ತರ ಮೆರವಣಿಗೆಯ ಸ್ವಾಮೀಜಿಯವರ ಪುರ ಪ್ರವೇಶ ನಡೆಯಲಿದೆ ಎಂದರು.
ಶAಕರಾಚಾರ್ಯರು ೩ ಬಾರಿ ಭೇಟಿ ನೀಡಿದ ಅಶೋಕೆಯಲ್ಲಿ ಜುಲೈ 13 ರಂದು ಚಾತುರ್ಮಾಸ ಪ್ರಾರಂಭವಾಗಲಿದ್ದು, ಧರ್ಮಸಭೆ ನಡೆಯಲಿದೆ. ಅಂದು ಎಲ್ಲ ಭಕ್ತರಿಗೆ ವ್ಯಾಸ ಮಂತ್ರಾಕ್ಷತೆ ನೀಡಲಾಗುವುದು. ಚಾತುರ್ಮಾಸದ 60 ದಿನದವರೆಗೂ ಶಪ್ತಸತಿ ಪಾರಾಯಣ ನಡೆಯಲಿದೆ. ಚಾತುರ್ಮಾಸಕ್ಕೆ ಬರುವ ಎಲ್ಲ ಭಕ್ತರಿಗೂ ಶ್ರೀ ಭಕ್ಷ –ಅಮೃತಫಲ ದೊರೆಯಲಿದೆ ಎಂದರು.
ಡಿ.ಡಿ.ಶರ್ಮಾ ಮಾತನಾಡಿ, ವಿಷ್ಣು ಗುಪ್ತ ವಿಶ್ವವಿದ್ಯಾಲಯಕ್ಕೂ ಅಂದು ಚಾಲನೆ ದೊರೆಯಲಿದ್ದು, ಪುರಾತನವಾದ, ಪಾರಂಪಾರಿಕವಾದ ನಡತೆ, ಸಂಸ್ಕಾರಗಳನ್ನು ಸ್ಥಾನಿಕವಾಗಿ ನೀಡುವುದು ಈ ವಿಶ್ವವಿದ್ಯಾಲಯದ ಉದ್ದೇಶವಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಾ.ಜಿ.ಜಿ.ಹೆಗಡೆ,ಉದ್ಯಮಿ ಮುರಳೀಧರ ಪ್ರಭು, ಎಂ.ಕೆ.ಹೆಗಡೆ, ಜಿ.ಎಸ್.ಹೆಗಡೆ, ಶ್ರೀಕಾಂತ ಪಂಡಿತ, ಆರ್.ಜಿ.ಹೆಗಡೆ, ಎನ್.ಆರ್.ಮುಕ್ರಿ, ಮಹೇಶ ಶೆಟ್ಟಿ, ವಿನಾಯಕ ಕೊಡ್ಲಕೆರೆ, ಗ್ರಾ.ಪಂ.ಅಧ್ಯಕ್ಷೆ ಭಾರತಿ ಗೌಡ ಹಾಗೂ ಇತರರು ಹಾಜರಿದ್ದರು.