ಕುಮಟಾ: ಕಳೆದ 3ರಿಂದ 4 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಂದಾವರದ ಚಂದ್ರಪ್ರಭಾ ಹೊಳೆಯ ನೀರಿನ ಹರಿವು ಹೆಚ್ಚಿದ ಪರಿಣಾಮ, ಹೊಳೆಯ ತೀರದ, ಜನವಸತಿ ಪ್ರದೇಶವಾದ ಹಿರೇಕಟ್ಟು ಭಾಗದ ಶಾಲೆ ಹಾಗೂ ಜನವಸತಿ ಪ್ರದೇಶ ಹತ್ತಿರ ಹಾಗೂ ಗದ್ದೆ ತೋಟಗಳಿಗೆ ನೀರು ನುಗ್ಗಿದೆ.
ಈ ಹಿನ್ನೆಲೆಯಲ್ಲಿ ಕೂಜಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ವೈಭವ ನಾಯ, ಹೆಚ್ಚಿನ ಮುತುವರ್ಜಿ ವಹಿಸಿ ಕೂಡಲೇ , ಅಧಿಕಾರಿಗಳು ಹಾಗೂ ಗ್ರಾ,ಪಂ ಅದ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ, ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಿದರು. ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಗಜಾನನ ನಾಯ್ಕ, ಗ್ರಾ.ಪಂ ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ನಾಗರಾಜ ನಾಯಕ, ಆರ್.ಆಯ್ , ಕುಮಾರ ಪಾಟೀಲ್ ಇತರಿದ್ದರು.