ಹೊನ್ನಾವರ: ವ್ಯಾಪಕವಾದ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 69 ರ ಗೇರುಸೊಪ್ಪ ಸೂಳೆಮುಕ್ಕಿ ಕ್ರಾಸ್ ಸಮೀಪ ಗುಡ್ಡ ಕುಸಿತ ಉಂಟಾಗಿರುವ ಪರಿಣಾಮ ರಸ್ತೆ ಕುಸಿದಿದೆ. ಮತ್ತಷ್ಟು ಕುಸಿಯುವ ಸಾಧ್ಯತೆ ಹೆಚ್ಚಿರುವುದರಿಂದ ಸುರಕ್ಷತಾ ಕ್ರಮವಾಗಿ ವಾಹನಗಳ ಸಂಚಾರವನ್ನು ಮಾಡಲಾಗಿದೆ,
ಗೇರುಸೋಪ್ಪಾ ಮಾರ್ಗವಾಗಿ ಮಾವಿನಗುಂಡಿ, ಸಿದ್ದಾಪುರ, ಜೋಗ, ತಾಳಗುಪ್ಪಾ, ಸಾಗರ, ಶಿವಮೊಗ್ಗಾ ಕಡೆಗೆ ಸಂಚರಿಸುವ ವಾಹನ ಸವಾರರು ಮಾರ್ಗ ಬದಲಿಸುವಂತೆ ಸೂಚಿಸಲಾಗಿದೆ.