ಕುಮಟಾ: ಹೆಗಡೆ ಕ್ರಾಸ್‌ನ ಕಾಲೇಜ್ ರೋಡ್‌ನಲ್ಲಿ ರಸ್ತೆಯಲ್ಲಿ ತುಂಬಾ ಹೊಂಡಗಳು ಬಿದ್ದು, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗಿರುವುದನ್ನು ಮನಗಂಡು ನಾನು ಸ್ವತ: ಬಂದು ಡಾಂಬರ್ ಹಾಕಿಸುವ ಕಾರ್ಯ ಮಾಡಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಈ ರಸ್ತೆಯ ಮುಂದಿನ ಭಾಗವನ್ನು ಸದ್ಯದಲ್ಲೇ ಮಾಡಿಸಲಿದ್ದೇನೆ ಮಳೆಗಾಲದಲ್ಲಿ ರಸ್ತೆ ಹಾಳಾಗಿ ಗುಂಡಿಗಳು ನಿರ್ಮಾಣವಾಗುವುದು ಸಹಜ. ಅದು ಯಾವುದೇ ಪಕ್ಷದ ಶಾಸಕರಿದ್ದರೂ ಆಗೆ ಆಗುತ್ತದೆ. ನಾನು ಮೊದಲಿನಿಂದಲೂ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಲೇ ಬಂದಿದ್ದೇನೆ. ಮಾದನಗೇರಿಯಿಂದ ಗೋಕರ್ಣದವರೆಗೂ ಉತ್ತಮ ರಸ್ತೆ ಮಾಡಲಾಗುವುದು ಎಂದ ಅವರು, ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿ ನಂತ ಒಂದು ಪೈಪ್ ಅಳವಡಿಸಬೇಕಿತ್ತು. ಆಗ ಅರ್ಧ ಪೂರ್ಟ ರಸ್ತೆ ಕೊರೆದು ಪೈಪ್ ಅಳವಡಿಸಿ ಅದನ್ನು ಐಆರ್.ಬಿಯವರು ಸರಿಪಡಿಸುವರಿದ್ದರು. ಅಷ್ಟರಲ್ಲಿ ನಮ್ಮ ವಿರೋಧಿಗಳು ಬಾಳೆ ಗಿಡ ನೆಟ್ಟು ಶೋ ಕೊಡುತ್ತಿದ್ದಾರೆ. ಬಸ್‌ಗಳ ಓಡಾಟದಿಂದ ಸ್ವಲ್ಪ ರಸ್ತೆ ಕಿತ್ತು ಗುಂಡಿ ಆಗಿದ್ದು ನಿಜ. ಆದರೆ ನಮ್ಮ ಅಭಿವೃದ್ದಿ ಕಾರ್ಯ ಸಹಿಸದವರು ಅದರಲ್ಲಿ ಕಲ್ಲು ಮಣ್ಣು ಹಾಕಿ, ಶಾಶ್ವತ ವಲ್ಲದ ಕಾರ್ಯ ಮಾಡುತ್ತಿದ್ದಾರೆ. ಅದು ಬಹಳ ದಿನ ನಿಲ್ಲುವಂತದಲ್ಲ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ನಿರ್ಮಾಣ ಮಾಡಲಾಗಿಗದೆ. ನಗರದಲ್ಲಿ ಸುಭಾಸ ರಸ್ತೆ, ಗುಜ್ಜರಗಲ್ಲಿ ಕಾಸ್ರ, ಚಿತ್ರಗಿ ಹೀಗೆ ಬಹಳ ಕಡೆ ಇಂಟರ್‌ಲಾಕ್ ಅಳವಡಿಸಲಾಗಿದೆ ಎಂದರು.