Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಹರಿಕಾಂತ್ರ ಸಭಾಭವನವನ್ನು ಲೋಕಾರ್ಪಣೆಗೊಳಿಸಿದ ಜಿ.ಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಭಾವಿ

ಕುಮಟಾ: ನಾವು ಸಂಘಟಿತರಾಗಬೇಕು ಸಂಘಟನೆಯ ಮೂಲಕ ನಮ್ಮ ಗ್ರಾಮವನ್ನು ಅಭಿವೃದ್ದಿಯತ್ತ  ಹೆಜ್ಜೆ ಇಡಬೇಕು. ಯಾರೆ ಅಭಿವೃದ್ದಿ ಕಾರ್ಯಕ್ಕೆ ಮುಂದಾದರೆ,   ನಾವು ಅವರ ಜೋತೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಭಾವಿ ಅಭಿಪ್ರಾಯಪಟ್ಟರು.
 ಅವರು ಬರ್ಗಿ ಗ್ರಾ.ಪಂ ವ್ಯಾಪ್ತಿಯ ಬೆಟ್ಕುಳಿ ಗ್ರಾಮದ ಹರಿಕಾಂತ್ರ ಸಭಾಭವನವನ್ನು ಲೋಕಾರ್ಪಣೆಗೊಳಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹರಿಕಾಂತ್ರ ಸಮಾಜದ ಬಹುದಿನಗಳ ಕನಸು ಈ ಸಭಾಭವನವಾಗಿತ್ತು. ನನಗೂ ಮತ್ತು ಬೆಟ್ಕುಳಿ ಗ್ರಾಮಕ್ಕೂ ಅವಿನಾಭಾವ ಸಂಭಂಧವಿದೆ.ಜಿಲ್ಲಾ ಪಂಚಾಯತ್ ಅನುದಾನವನ್ನು ನೀಡಿ ಈ ಒಂದು ಸಭಾಭವನವನ್ನು ಪೂರ್ಣಗೊಳಿಸಿದ ಆತ್ಮತೃಪ್ತಿ ನನ್ನಲ್ಲಿದೆ. ಅಭಿವೃದ್ದಿಯ ವಿಚಾರವಾಗಿ ಪ್ರತಿಯೊಬ್ಬರೂ ಪಕ್ಷಬೇಧ ಮರೆತು ಬಂದಾಗಬೇಕು. ಅಭಿವೃದ್ದಿಯ ವಿಚಾರದಲ್ಲಿ ರಾಜಕಾರಣ ಮಾಡಬಾರದು ಚುನಾವಣೆಯ ಸಂಧರ್ಭದಲ್ಲಷ್ಟೆ ಪಕ್ಷದ ರಾಜಕಾರಣ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಮಾತನಾಡಿ, ಹಿಂದುಳಿದ ವರ್ಗದ ಜನರು, ಅಭಿವೃದ್ದಿ, ಹಾಗೂ ಶೈಕ್ಷಣಿಕವಾಗಿಯು ಹಾಗೂ  ಸಂಘಟನಾತ್ಮಕವಾಗಿ ಹೆಜ್ಜೆ ಇಡಬೇಕು. ಆಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಪ್ರದೀಪ ನಾಯಕ ದೇವರಭಾವಿ ತಮಗೆ ಜಿ.ಪಂ ವ್ಯಾಪ್ತಿಗೆ ಬಂದ ಅನುದಾನವನ್ನು ನೀಡಿ ಸುಸಜ್ಜಿತವಾದ ಸಭಾಭವನವನ್ನು ನಿರ್ಮಿಸಿಕೊಟ್ಟಿದ್ದಾರೆ. ಮೀನುಗಾರರು ಕರಾವಳಿ ತೀರದ ಶ್ರಮ ಹಾಗೂ ಸಂಸ್ಕ್ರತಿಯ ಪ್ರತಿಬಿಂಬಗಳು ನಿಮ್ಮ ಕಷ್ಟ- ಹಾಗೂ ಅಭಿವೃದ್ದಿ ವಿಚಾರದ  ಪ್ರತಿಯೊಂದು ಹೋರಾಟದಲ್ಲೂ ನಾವು ಇದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹರಿಕಾಂತ್ರ ಸಮಾಜ ಅಭಿವೃದ್ದಿ ಒಕ್ಕೂಟದ ತಾಲೂಕಾಧ್ಯಕ್ಷ ಜಗದೀಶ ಹರಿಕಂತ್ರ ಮಾತನಾಡಿ ಮೀನುಗಾರರಿಗೆ ಯಾವುದೇ ಸಭೆ- ಸಮರಂಬಗಳನ್ನು ನಡೆಸಲು ಇಲ್ಲಿ ಸ್ಥಳಾವಕಾಶವಿರಲಿಲ್ಲ. ಆಗ ನಮ್ಮ ಜನಾಂಗದ ಹಿರಿಯರ ಪರಿಕಲ್ಪನೆಯಲ್ಲಿ ಈ ಸ್ಥಳದಲ್ಲಿ ತಳಪಾಯ ಪ್ರತಿಯೊಬ್ಬರ ಬೆವರಿನ ಶ್ರಮದಿಂದ ನಿರ್ಮಾಗೊಂಡಿತು. ಗ್ರಾಮಸ್ಥರು, ಯುವಕರು ಸೇರಿ ಎಲ್ಲ ತಾಯಂದಿರ ಆಶೀರ್ವಾದದಿಂದ ಸಭಾಭವನದ ನಿರ್ಮಾಣದ ಕನಸು ಕಂಡರು. ಆ ಕನಸನ್ನು ಪರಿಪೂರ್ಣಗೊಳಿಸಲು ಜಿ.ಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ಸಹಕರಿಸಿದ್ದಾರೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಬೆಟ್ಕುಳಿಯ ಹರಿಕಾಂತ್ರ ಸಮಾಜದ ಯಜಮಾನ ಲಕ್ಷ್ಮಣ ಹರಿಕಾಂತ್ರ, ತೊರ್ಕೆ ಗ್ರಾ.ಪಂ ಅಧ್ಯಕ್ಷರಾದ ಆನಂದು ಕವರಿ, ಗೋಕರ್ಣ ಮಹಾಬಲೇಶ್ವರ ಅರ್ಬನ ಬ್ಯಾಂಕಿನ ಅಧ್ಯಕ್ಷರಾದ ಮೋಹನ ಎಸ್. ನಾಯಕ, ಉಪಾಧ್ಯಕ್ಷ ರಾಮು ಕೆಂಚನ್, ಗ್ರಾಮ ಪಂಚಾಯತ  ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ ಬೆಟ್ಕುಳಿಯ ಮೀನುಗಾರಿಕಾ ಸಹಕಾರಿ ಸಂಘಧ ಅದ್ಯಕ್ಷ ನೂರುದ್ದೀನ ಮೋಘಲ್, ಉದ್ದಿಮೆದಾರ ಆನಂದು ಹರಿಕಾಂತ್ರ, ಸೇವಾ ಸಹಕಾರಿ ಬ್ಯಾಂಕ್ ಬರ್ಗಿ ಅಧ್ಯಕ್ಷ ಬೊಮ್ಮಯ್ಯ ಪಟಗಾರ, ಸದಸ್ಯ ತುಕರಾಮ ನಾಯ್ಕ, ತೊರ್ಕೆ ಗ್ರಾ.ಪಂ ಮಾಜಿ ಸದಸ್ಯರಾದ ಗೋಪಾಲ ಹೊಸ್ಕಟ್ಟಾ ಇತರಿದ್ದರು.