Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಯುವ ಪತ್ರಕರ್ತ, ವಿನಾಯಕ ಬ್ರಹ್ಮೂರು ಇನ್ನಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ವಿನಾಯಕ

ಕುಮಟಾ : ಕಿರುಚಿತ್ರ ಹಾಗೂ ಪತ್ರಿಕೋದ್ಯಮದ ಮೂಲಕ ಹೆಸರು ಮಾಡಿದ್ದ ಕುಮಟಾ ತಾಲೂಕಿನ ಬ್ರಹ್ಮೂರಿನ ವಿನಾಯಕ ಭಟ್ಟ ಅಪಘಾತದಿಂದ ಆಸ್ಪತ್ರೆ ಸೇರಿದ್ದು ನಿನ್ನೆ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ. ವಿಶೇಷ ಬರಹಗಳ ಮೂಲಕ ಹಾಗೂ ಲೇಖನಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಇವರು ಕಾರವಾರ ಹಾಗೂ ಕುಮಟಾದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. ಪ್ರಜಾವಾಣಿ, ಕರಾವಳಿ ಮುಂಜಾವು, ನೂತನ, ಜನಮಾಧ್ಯಮ ಇಂತಹ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ವಿಶೇಷ ಹಾಗೂ ನಿಖರ ಬರಹದ ಮೂಲಕ ಜನರ ಮನಸ್ಸು ಗೆದ್ದಿದ್ದ ಖ್ಯಾತ ಬರಹಗಾರ ಇವರಾಗಿದ್ದರು.


ಉತ್ತರ ಕನ್ನಡದಲ್ಲಿ ಕಿರು ಚಿತ್ರಗಳನ್ನು ತಯಾರಿಸುವ ಮೂಲಕ ಉತ್ತರ ಕನ್ನಡದಲ್ಲಿ ಕಿರು ಸಿನಿಮಾದ ಅಪ್ರತಿಮ ಸಾಹಸಿ ಎಂದೇ ಇವರು ಗುರುತಿಸಲ್ಪಟ್ಟಿದ್ದರು. ಸಮಾಜಕ್ಕೊಂದು ಸಂದೇಶ ಸಾರುವ ವಿವಿಧ ಕಿರು ಚಿತ್ರಗಳ ಮೂಲಕ ಇವರು ಪ್ರಸಿದ್ಧಿ ಪಡೆದಿದ್ದರು.

ಪ್ರಸ್ತುತ ಕುಮಟಾದ ಶಾಸಕರಾದ ದಿನಕರ ಶೆಟ್ಟಿಯವರ ಮಾದ್ಯಮ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ, ಇವರು ಬೈಕ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರು. ಇವರ ಮಿದುಳು ನಿಶ್ಕ್ರಿಯವಾಗಿದ್ದು ಆಸ್ಪತ್ರೆಯ ಚಿಕಿತ್ಸೆಗೂ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.