Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕುಮಟಾ ತಾಲೂಕಾ ಪಂಚಾಯತ ಸಾಮಾನ್ಯ ಸಭೆ

ಕುಮಟಾ: ತಾಲೂಕಾ ಪಂಚಾಯತ ಸಾಮಾನ್ಯ ಸಭೆಯನ್ನು ತಾ.ಪಂ ಆಡಳಿತಾಧಿಕಾರಿಯಾದ ಎನ್.ಜಿ.ನಾಯ್ಕ ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಭವನದಲ್ಲಿ ನಡೆಯಿತು.ಈ ವೇಳೆ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಪ್ರಗತಿಯನ್ನು ಸಭೆಯಲ್ಲಿ ಮಂಡಿಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಲ್.ಭಟ್ ಅವರು ಮಾತನಾಡಿ ತಾಲೂಕಿನಲ್ಲಿ ಪ್ರತಿ ತಿಂಗಳಿಗೂ ಶಿಕ್ಷಕರು ನಿವೃತ್ತಿ ಹೊಂದುತ್ತಿದ್ದು ಅಥಿತಿ ಶಿಕ್ಷಕರ ಅವಶ್ಯಕತೆ ಇದೆ ಎಂದು ಹೇಳಿದರು. ಇನ್ನು ತಾಲೂಕಿನ ಬಹಳಷ್ಟು ಶಾಲೆಗಳಲ್ಲಿ ಸಂಚಿತ ನಿಧಿಯ ಕೊರತೆ ಇರುವ ಕಾರಣ ಶಿಕ್ಷಕರು ಸ್ವಂತ ಹಣದಲ್ಲಿ ಗ್ಯಾಸ್ ಸಿಲೆಂಡರ್ ಖರೀಧಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗೂ ತಾಲೂಕಿನ ೪೮ ಶಾಲೆಗಳನ್ನು ಕಾಳಜಿ ಕೇಂದ್ರವೆಂದು ಗುರುತಿಸಲಾಗಿದ್ದು ಅಲ್ಲಿಯು ಸಹ ಗ್ಯಾಸ್ ಸಿಲೆಂಡರ್ ಅವಶ್ಯಕತೆ ಇದೆ. ಆ ಕಾರಣಕ್ಕಾಗಿ ಈ ಕುರಿತು ವಿಶೇಷ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. 
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕರಾದ ವಿ.ಕೆ.ಹೆಗಡೆ ಮಾತನಾಡಿ ಉಚಿತವಾಗಿ ಕೋಳಿ ಮರಿ ವಿತರಣೆ  ಮಾಡುವ ಯೋಜನೆ ಇದ್ದು ಓರ್ವ ಪಲಾನುಭವಿಗಳಿಗೆ ೨೦ ಕೋಳಿ ಮರಿಯಂತೆ ತಾಲೂಕಿನ ೧೦೬ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಕಾರ್ಯನಿರ್ವಣಾಧಿಕಾರಿ ನಾಗರತ್ನಾ ನಾಯಕ, ಕೃಷಿ ಸಹಾಯಕ ನಿರ್ದೇಶಕರಾದ ರಶ್ಮಿ ಶಹಪುರಮಠ, ತಾಲೂಕಾ ಆರೋಗ್ಯಧಿಕಾರಿ ಆಜ್ಞಾ ನಾಯಕ,ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಆರ್.ಜಿ.ನಾಯ್ಕ ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.