ಸಿದ್ದಾಪುರ:ಉಂಚಳ್ಳಿ ಫಾಲ್ಸ್ ನೋಡಲು ಸ್ವಿಪ್ಟ್ ಕಾರಿನಲ್ಲಿ ಬಂದಿದ್ದ ನಾಲ್ವರು ದುರ್ಮರಣಕ್ಕೀಡಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೆಗ್ಗರಣಿ ಕೋಡನಮನೆ ಬಳಿಯ ಹಳ್ಳದಲ್ಲಿ ನಡೆದಿದೆ. ಉಂಚಳ್ಳಿ ಪಾಲ್ಸ್ ನೋಡಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಕಾರಿನಲ್ಲಿ ನಾಲ್ವರು ಇದ್ದು, ಮೂವರ ಶವಗಳನ್ನ ಹೊರಗೆ ತೆಗೆಯಲಾಗಿದೆ.
ಘಟನೆಯಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ ನಿಶ್ಚಿಲ್ ಹಿರೇಮಠ, ಬೆಂಗಳೂರು ಮೂಲದ ಹುಬ್ಬಳ್ಳಿ ಕೆಎಲ್ಇ ಕಾಲೇಜಿನ ವಿದ್ಯಾರ್ಥಿ ರೋನಿತ್, ಹುಬ್ಬಳ್ಳಿ ವಿದ್ಯಾನಗರದ ಅಕ್ಷತಾ ಹಿರೇಮಠ, ಹಾಗೂ ಸುಶ್ಮೀತಾ ಕಾರಿನಲ್ಲಿ ಬಂದವರಾಗಿದ್ದು, ನಾಲ್ವರಲ್ಲಿ ಈಗಾಗಲೇ ಮೂವರ ಶವ ಪತ್ತೆಯಾಗಿದ್ದು ಒಬ್ಬರಿಗಾಗಿ ಹುಡುಕಾಟ ನಡೆದಿದೆ. ಹಳ್ಳದಲ್ಲಿ ಮುಳಗಡೆಯಾಗಿರುವ ಕಾರ ಹುಬ್ಬಳ್ಳಿ ನೋಂದಣಿ ಹೊಂದಿದ್ದು.
ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯಿಂದ ಉಂಚಳ್ಳಿ ಫಾಲ್ಸ್ ಗೆ ಬಂದು ಸಂಜೆ ವಾಪಸ್ ಆಗತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿಂದಿದೆ ಎನ್ನಲಾಗಿದ್ದು, ಇಂದು ಸಂಜೆ ವೇಳೆ ಕಾರು ಹಳ್ಳಕ್ಕೆ ಬಿದ್ದಿರುವುದು ಕಂಡು ಬಂದಿದೆ. ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಜಿ ಟಿ ನಾಯಕ ಹಾಗೂ ಸಿದ್ದಾಪುರ ಠಾಣೆ ಪೊಲೀಸರ ಭೇಟಿ ಕಾರ್ಯಾಚರಣೆ ನಡೆಸುತ್ತಿದ್ದು, ಹಳ್ಳಕ್ಕೆ ಬಿದ್ದಿರುವ ಕಾರು ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಯಾಗಿರುವ ಮಾವೀರ ದೇವಕ್ಕಿ ಸೇರಿದ್ದಾಗಿದೆ.