ಕಾರವಾರ:ರಾಜ್ಯದ ಗಡಿಭಾಗದ ಬಗ್ಗೆ ಮತ್ತೆ ಮಹರಾಷ್ಟ್ರಿಗರ ತಗಾದೆ ಆರಂಭವಾಗಿದ್ದು, ಕಾರವಾರ ನಮ್ಮಗೆ ಸೇರಿದ್ದು ಅಂತಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಗೆ ಜಿಲ್ಲೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಗತ್ತಾ ಇದೆ. ಈ ಬಗ್ಗೆ ಪ್ರತಿಯಿಸಿರೋ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಜಿತ್ ಪವಾರ್ ಕಾರವಾರ ಸಹ ತಮ್ಮಗೆ ಸೇರಿದ್ದು, ಅಂತಾ ಏನು ಹೇಳಿಕೆ ನೀಡಿದ್ದಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತು ಇಲ್ಲ. ಯಾವ ಕಾರಣಕ್ಕೂ ನಮ್ಮ ಒಂದು ಇಂಚು ಜಾಗವನ್ನ ಬಿಟ್ಟುಕೊಡಲು ಬರುವುದಿಲ್ಲ ಎನ್ನುವ ಮೂಲಕ ಪವಾರ್ ಗೆ ಪವರ ಪುಲ್ ತಿರುಗೇಟು ನೀಡಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿದ ಕಾರವಾರ ಶಾಸಕಿ ರೂಪಾಲಿ ನಾಯ್ಕ
ಕರ್ನಾಟಕದಲ್ಲಿ ಕೋಲಾಹಲ ಎಬ್ಬಿಸಲು ಮರಾಠಿಗರ ಹುನ್ನಾರ ನಡೆಸಲಾಗತ್ತಿದೆ. ಕರ್ನಾಟಕದ ಗಡಿಭಾಗ ಎಂದಿಗೂ ಮಹಾರಾಷ್ಟ್ರದಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮರಾಠ ಪ್ರಾಧಿಕಾರ ರಚನೆ ಮಾಡುವ ಮೂಲಕ ಮಹಾರಾಷ್ಟ್ರ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ಕಾರವಾರ ಮತ್ತು ಬೆಳಗಾವಿ ಗಡಿಭಾಗ ಕರ್ನಾಟಕದ್ದು. ಕರ್ನಾಟಕದಲ್ಲಿರುವ ಮರಾಠಿಗರೆಲ್ಲರು ಕನ್ನಡಿಗರೇ. ಮರಾಠಿಗರ ಬೆಳಗಾವಿ, ಕಾರವಾರ ಕನಸನ್ನ ಸಿಎಂ ನುಚ್ಚು ನೂರು ಮಾಡಿದ್ದಾರೆ. ಅಜಿತ್ ಪವಾರ ಹಾಗೂ
ಮಹಾರಾಷ್ಡ್ರದವರು ಮೊದಲು ಅವರ ಗಡಿಯನ್ನ ಕಾದುಕೊಳ್ಳಲಿ.