ಹೊನ್ನಾವರ:ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮಪಂಚಾಯತ ಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸಿ ಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಈ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಮಂಕಾಳು ವೈದ್ಯ ಅವರು ಈ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸಿ ಪ್ರಯತ್ನ ಸಹ ಮಾಡಿದ್ದರು. ಮಂಕಿ ಈಗ ಬಿಜೆಪಿ ಸರಕಾರದಲ್ಲಿ ಇದಕ್ಕೆ ಅನೋಮೊದನೆ ಸಿಕ್ಕಂತಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಮಂಕಿ ಗ್ರಾಮವನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಅಂತಾ ಈ ಹಿಂದಿನಿಂದಲ್ಲೂ ಸರಕಾರದ ಮೇಲೆ ಒತ್ತಡ ಹಾಕಲಾಗತ್ತಾ ಇದ್ದು, ಅದು ಈಗ ಇಡೇರಿದಂತಾಗಿದೆ.