Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗಿ ಬಿದ್ದ ಕಾರ್.



ಹೊನ್ನಾವರ:ರಾಷ್ಟ್ರೀಯ ಹೆದ್ದಾರಿ 206ರ ತಾಲೂಕಿನ ಹಡಿನಬಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ ಓರ್ವ ಪ್ರಯಾಣಿಕ ಮೃತಪಟ್ಟ ಘಟನೆ ಗುರುವಾರ ಬೆಳಿಗಿನ ಜಾವ  ನಡೆದಿದೆ‌.



ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ ಕಾರ್  ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು   ಸೇತುವೆ ಅಡಿಯಲ್ಲಿರುವ ರಸ್ತೆಗೆ ಬಿದ್ದಿದೆ.  ಚಾಲಕನ ಸೇರಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು.  

ಘಟನೆಯಲ್ಲಿ ಕಾರ್  ನಜ್ಜುಗುಜ್ಜಾಗಿದ್ದು ಕಾರ್ ನಲ್ಲಿದ್ದ ಪ್ರಯಾಣಿಕ  ರಾಹುಲ್(32) ಎಂಬಾತ ವಿವಾಹಿತ ಯುವಕನ ಸಾವಾಗಿದೆ. ಒರ್ವ ಯುವತಿ  ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಉಳಿದವರಿಗೆ  ಕೈ ಕಾಲು ಮುರಿತವಾಗಿ ತೀವ್ರ ಸ್ವರೂಪದ ಗಾಯ ನೋವಾಗಿದೆ.ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದೆ.