ಹೊನ್ನಾವರ:ಮಾನಸಿಕವಾಗಿ ನೋಂದ ಮಹಿಳೆಯೊಬ್ಬರು ಹೊಳೆಗೆ ಹಾರಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಜಂಬೊಳ್ಳಿಯಲ್ಲಿ ನಡೆದಿದೆ.
ಮಂಜುಳಾ ಮಂಜುನಾಥ ನಾಯ್ಕ (೪೫) ಹೊಳೆಗೆ ಹಾರಿ ಸಾವನ್ನಪ್ಪಿರುವ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲ ದಿನಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದು, ಕುಟುಂಬದ ಸದಸ್ಯರೊರ್ವರು ಮಾನಸಿಕ ಖಾಯಿಲೆಯಿಂದ ಮನಸ್ಸಿಗೆ ಹಚ್ಚಿಕೊಂಡು ಹಡಿನಬಾಳ ಬ್ರೀಜ್ ಮೇಲಿಂದ ಗುಂಡಬಾಳ ಹೊಳೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.