ಹೊನ್ನಾವರ:ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಟ್ಟಾರ ರತ್ನಾಕರ ಹೆಗಡೆ ಉತ್ತರ ಕನ್ನಡ ಜಿಲ್ಲಾ ಮೂರು ದಿನಗಳ ಪ್ರವಾಸದ ಹಿನ್ನಲೆಯಲ್ಲಿ ಹೊನ್ನಾವರ ತಾಲೂಕಿನ ಪುರಾಣ ಪ್ರಸಿದ್ದ ದೇವಾಲಯವಾದ ಇಡಗುಂಜಿಯ ಮಹಾಗಣಪತಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ಸ್ವಿಕಾರ ಮಾಡಿದ ಮೇಲೆ ಕರೋನಾ ಮಹಾಮಾರಿಯಿಂದ ಅಭಿವೃದ್ದಿ ಕೆಲಸಕ್ಕೆ ಮತ್ತು ಪ್ರವಾಸಕ್ಕೆ ತೋಂದರೆ ಉಂಟಾಗಿತ್ತು. ಇದೀಗ ಅಭಿವೃದ್ದಿ ಕೆಲಸಕ್ಕೆ ಉತ್ತೆಜನ ನೀಡುತ್ತಿದ್ದೆವೆ. ಜಿಲ್ಲೆಯಲ್ಲಿ ೫೦ ಕೋಟಿ ರೂ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಹಲವು ಕಾಮಗಾರಿಯ ಬಗ್ಗೆ ಜಿಲ್ಲೆಯ ಶಾಸಕರು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮೀನು ಮಾರುಕಟ್ಟೆ ನಿರ್ಮಿಸುವಂತೆ ಬೇಡಿಕೆಗಳು ಇದ್ದು, ಅನುದಾನದ ಕೊರತೆಯಿಂದ ಸ್ವಲ್ಪ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ರಾಜೇಶ ಭಂಡಾರಿ, ಹಿಂದುಳಿದ ವರ್ಗದ ಜಿಲ್ಲಾ ಉಪಾದ್ಯಕ್ಷ ಗಣಪತಿ ನಾಯ್ಕ ಬಿಟಿ, ಹನ್ಮಂತ ನಾಯ್ಕ, ಸುರೇಶ ಹರಿಕಾಂತ, ಕಮಲಾಕರ ನಾಯ್ಕ, ಉಲ್ಲಾಸ ನಾಯ್ಕ, ಆನಂದ ನಾಯ್ಕ, ಗಣಪತಿ ಗೌಡ ಚಿತ್ತಾರ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ ಡಿಸೋಜಾ, ಇಂಜನಿಯರ್ ಪವನ್ ಶೇಟ್ಟಿ, ಅಧಿಕಾರಿಗಳು ಪಕ್ಷದ ಕಾರ್ಯಕರ್ತರು ಹಾಜರಿದ್ದರು.