Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ -ಈಶ್ವರ ನಾಯ್ಕ

ಕುಮಟಾ: ನಮ್ಮಲ್ಲಿರುವ ಚಿಕ್ಕಪುಟ್ಟ, ಭಿನ್ನಾಭಿಪ್ರಾಯಗಳನ್ನು ಸಮಾಜದ ಅಭಿವೃದ್ದಿ ತೊಡಕಾಗ ಬಾರದು ಎಂದು ನಾಮಧಾರಿ ಕ್ಷೇಮಾಭಿವೃದ್ದಿ ಸಂಘ ಕೂಜಳ್ಳಿಯ ಸಂಸ್ಥಾಪಕ ಅಧ್ಯಕ್ಷರಾದ ಈಶ್ವರ ರುಕ್ಕು ನಾಯ್ಕ ಅವರು ಅಭಿಪ್ರಾಯಪಟ್ಟರು.

ಅವರು ಕೂಜಳ್ಳಿಯಲ್ಲಿ ನಡೆದ ಪ್ರಸಕ್ತ  ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಉತ್ತಮ ಅಂಕಗಳಿಸಿದ ಸಮಾಜದ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಮ್ಮ ಸಮಾಜ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ದೊಡ್ಡ ಸಮಾಜವಾದರೂ ಸಂಘಟನೆ ವಿಷಯದಲ್ಲಿ ಹರಿದು ಹಂಚಿಹೋಗಿದ್ದಾರೆ. ರಾಜಕೀಯ, ಆರ್ಥಿಕ, ಹಾಗೂ ಸಾಮಾಜಿಕವಾಗಿಯು ಸಮಾಜ ಅಭಿವೃದ್ದಿಯಾಗಬೇಕಿದೆ. 

ನಮ್ಮ ಕೂಜಳ್ಳಿಯಲ್ಲಿ ಸಮಾಜವನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದ್ದೆ ಅದರ ಮೊದಲ ಹೆಜ್ಜೆಯಾಗಿ  ಸಮಾಜದ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಊರಿನ  ಸಮಾಜದ ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆ ಸೇರಿದಂತೆ ಅನೇಕ ರಂಗದಲ್ಲಿ  ಉತ್ತೇಜನ ನೀಡುವುದು ನಮ್ಮ ಜವಬ್ದಾರಿಯಾಗಿದೆ ಎಂದು ಹೇಳಿದರು.


ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಕೆ.ಬಿ ನಾಯ್ಕ ದೀಪಬೆಳಗಿಸುವುದರ ಮೂಲಕ ಉದ್ವಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ನಂತರ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಬಂದ ವಿದ್ಯಾರ್ಥಿಯಾದ  ಅಕ್ಷಯ ಅನಿಲ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಧನುಜ ಮಾಹಾದೇವ ನಾಯ್ಕ,ಅಮೋಘ ಉಮೇಶ್ ನಾಯ್ಕ, ಸಿಂಚನ ರಾದಾಕೃಷ್ಣ ನಾಯ್ಕ, ಶ್ರೇಯಾ ರವಿಂದ್ರ ನಾಯ್ಕ,ನಯನಾ ಚಂದ್ರಶೇಕರ ನಾಯ್ಕ ಇವರಿಗೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಊರಿನ ಸಮಾಜದ ಮುಖಂಡರಾದ ಯಶವಂತ ನಾಯ್ಕ, ಜನಾರ್ದನ ನಾಯ್ಕ, ಸುಬ್ಬಯ್ಯ ನಾಯ್ಕ, ಸತ್ಯಪ್ಪ ನಾಯ್ಕ ಮುಂತಾದವರು ಇದ್ದರು.