Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಪುರಸಭೆ-ಕುಮಟಾ ಸಾರ್ವಜನಿಕ ಪ್ರಕಟಣೆ.

ಕುಮಟಾ:    ಪುರಸಭೆ  ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಕೊರೋನಾ ಸೊಂಕಿತ ಮತ್ತು ಸೊಂಕಿತರ ಸಂಪರ್ಕದಲ್ಲಿರುವ ಕುಟುಂಬಗಳು ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗಿರುತ್ತದೆ. ಹೋಮ್ ಕ್ವಾರಂಟೈನ್ ನಲ್ಲಿರುವ ಕೆಲ ಬಡ ಕುಟುಂಬಗಳು ಕೂಲಿಯನ್ನೇ ಆಶ್ರಯಿಸಿದ್ದು, ಇವರುಗಳು ಆಹಾರ ಕಿಟ್ ಗಳನ್ನು ದೊರಕಿಸಿಕೊಡುವಂತೆ ಪುರಸಭೆ ಕಚೇರಿಗೆ ಮನವಿ ಮಾಡಿದ್ದಾರೆ. 
ಆದ್ದರಿಂದ ಆಸಕ್ತ ದಾನಿಗಳು ಕನಿಷ್ಠ ರೂ. 1000/- (ಒಂದು ಸಾವಿರ) ಮೌಲ್ಯದ ಆಹಾರ ಕಿಟ್ ಗಳನ್ನು ಮತ್ತು ಮಾಸ್ಕಗಳನ್ನು ನೇರವಾಗಿ ಪುರಸಭೆಗೆ ನೀಡುವಂತೆ ಕೋರಲಾಗಿದೆ. ದಾನಿಗಳ ಹೆಸರನ್ನು ವಾರಕ್ಕೊಮ್ಮೆ ಸಾರ್ವಜನಿಕವಾಗಿ ಪ್ರಕಟಿಸಲಾಗುವದು. ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ 23 ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು,ಸಾಮಾಜಿಕ ಸೇವಾ ಮನೋಭಾವ ಉಳ್ಳವರು ಸದರ ಸಮಿತಿಗೆ ಸೇರಬಹುದಾಗಿರುತ್ತದೆ. ಈ ಬಗ್ಗೆ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ದಾನಿಗಳು ಮತ್ತು ಸಾರ್ವಜನಿಕರು ಕೋವಿಡ್-19 ಕೊರೊನಾ ಖಾಯಿಲೆಯನ್ನು ನಿಯಂತ್ರಿಸುವ ಬಗ್ಗೆ ಪುರಸಭೆಯೊಂದಿಗೆ ಕೈ ಜೋಡಿಸಲು ವಿನಂತಿಸಲಾಗಿದೆ.
ಮುಖ್ಯಾಧಿಕಾರಿ
                                                  ಪುರಸಭೆ ಕುಮಟಾ