ಕುಮಟಾ: ಪ್ರವಾಹ ಪೀಡಿತ ಸ್ಥಳದ ಕಾಳಜಿ ಕೇಂದ್ರಕ್ಕೆ ಬಿಜೆಪಿಯ ಯುವ ಮೊರ್ಚಾ ಜಿಲ್ಲಾ ಪ್ರಭಾರಿಯಾದ ಎಂ.ಜಿ.ಭಟ್ ಪ್ರವಾಹ ಪೀಡಿತ ಸಂತ್ರಸ್ತರ ನಿತ್ಯದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು.
ಚಂದಾವರದ ಚಂದ್ರಪ್ರಭಾ ಹೊಳೆಯು ತುಂಬಿ ಹರಿದು, ಹೊಳೆ ತೀರದ ಪ್ರದೇಶದ ಮನೆಗಳಿಗೆ ಹಾಗೂ ತೋಟಗಳಿಗೆ ನೀರು ನುಗ್ಗಿದ್ದು ಪ್ರವಾಹ ಸಂತ್ರಸ್ತರು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಊರುಕೇರಿಯ ಕಡವು, ಮತ್ತು ಕೊನಳ್ಳಿ, ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ಎಂ.ಜಿ.ಭಟ್ ಭೇಟಿ ನೀಡಿ, ಅವರಿಗೆ ದೈರ್ಯ ತುಂಬುವ ಕೆಲಸ ಮಾಡಿದರು. ಈ ಸಂಧರ್ಭದಲ್ಲಿ ಕೂಜಳ್ಳಿ ಗ್ರಾ.ಪಂ ಸದಸ್ಯರಾದ ವೈಭವ ನಾಯ್ಕ, ಕಮಲಾಕರ ನಾಯ್ಕ, ವಾಲಗಳ್ಳಿ ಪಂಚಾಯತ ಅಧ್ಯಕ್ಷರಾದ ಪ್ರಕಾಶ ಶಾನಭಾಗ, ರಾಮಚಂದ್ರ ಮಡಿವಾಳ, ವಿಕ್ರಂ ಪುರೋಹಿತ, ಮಂಜು ನಾಯ್ಕ, ಜಿ.ಎಸ್.ಭಟ್, ಮೂರ್ತಿ ನಾಯ್ಕ, ಹಾಗೂ ಇತರಿದ್ದರು.