Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬೀದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ಹಾಗೂ ವಸತಿ ಯೋಜನೆಯಡಿ ಮಂಜೂರಾತಿ ಪತ್ರ ವಿತರಣೆ

 ಕುಮಟಾ: ಕಳೆದ ಎರಡು ವರ್ಷದಿಂದ ಕೋವಿಡ್ ನೆರೆಹಾವಳಿ ಹಾಗೂ ಇನ್ನಿತರ ಆರ್ಥಿಕ ಕಾರಣದಿಂದಾಗಿ ಹಕ್ಕು ಪತ್ರವನ್ನು ನೀಡಲು ವಿಳಂಬವಾಯಿತು ಎಂದು ಶಾಸಕರಾದ ದಿನಕರ ಶೆಟ್ಟಿ ಹೇಳಿದರು. ಅವರು  ಬೀದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣೆ ಹಾಗೂ ವಸತಿ ಯೋಜನೆಯಡಿ ಮಂಜೂರಾತಿ ಪತ್ರ ವಿತರಣೆ ಹಾಗೂ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ  ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.


 ಹಕ್ಕು ಪತ್ರ ಸಿಗಲು ಪುರಸಭೆಯ ಸದಸ್ಯರು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಹೆಚ್ಚಿನ ಮುತುವರ್ಜಿಹಿಸಿದರಿಂದ ಸಾಧ್ಯವಾಯಿತು. ಪುರಸಭೆಗೆ ೫ ಕೋಟಿ ಅನುದಾನ ವನ್ನು ತಂದು ರಸ್ತೆ ಅಭಿವೃದ್ದಿ ಮಾಡಿಸಿದ್ದೇನೆ, ಸದ್ಯ ೧೦ ಕೋಟಿ ತಂದು ರಸ್ತೆ ಹಾಗೂ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.


ಅಂಭೇಡ್ಕರ ವಸತಿ ನಿಗಮ ಹಾಗೂ ವಾಜಪೇಯಿ ವಸತಿ ನಿಗಮದಲ್ಲಿ ಅರ್ಹ ಪಲಾನುಭವಿಗಳಿಗೆ ಮನೆಗಳನ್ನು ವಿತರಣೆ ಮಾಡುತ್ತಿದ್ದೇವೆ. 2022-23 ನೇ ಸಾಲಿಗೆ ಸಂಭಂದಿಸಿದಂತೆ  53 ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ಯೋಜನೆಯಡಿಯಲ್ಲಿ ಸಾಲ ಮಂಜೂರಾತಿ ಪತ್ರ ವಿತರಣೆ ಮಾಡಿದ್ದೇವೆ ಎಂದು ಮುಖ್ಯಾಧಿಕಾರಿಗಳು ಹೇಳಿದರು.


ಈ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಅನುರಾಧ ಭಾಳೇರಿ, ಉಪಾಧ್ಯಕ್ಷರಾದ ಸುಮತಿ ಭಟ್ ಸದಸ್ಯರಾದ ಮೋಹಿನಿ ಗೌಡ ಪುರಸಭಾ ಮುಖ್ಯಾಧಿಕಾರಿಗಳು ಸೇರಿದಂತೆ ಇತರಿದ್ದರು.