ಕುಮಟಾ: ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಗಣೆಯಲ್ಲಿ ಒಂದೆ ಕುಟುಂಬದ ಮೂವರು ಸಾವನಪ್ಪಿದ ಘಟನೆ ನಡೆದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹಾಗೂ ಕುಡಿದು ಅಮಲಿನಲ್ಲಿ ರಾಮ ಮರಾಠಿ ( 40 ) ರಾತ್ರಿ 2 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಹೆಂಡತಿ ( 35) ತಾಕಿ ಮರಾಠಿ ಮಲಗಿದ್ದ ಸ್ಥಳದಲ್ಲಿಯೇ ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿದ್ದಲ್ಲದೆ, ತಂದೆ ಕೊಲೆ ಮಾಡುವುದನ್ನು ಕಂಡ ಮಕ್ಕಳಾದ ಲಕ್ಷ್ಮಣ (12) ಮತ್ತು ಭಾಸ್ಕರ(15) ಇವರು ಮನೆಯಿಂದ ಹೊರಗೆ ಬಂದು ತಪ್ಪಿಸಿಕೊಂಡು ಓಡುತ್ತಿರುವ ವೇಳೆ ರಾಮ ಮರಾಠಿ ಇತನು ಮಕ್ಕಳನ್ನು ಬೆನ್ನಟ್ಟಿ ಮನೆಯ ಹೊರಗಡೆ ಮಗ ಲಕ್ಷ್ಮಣನ ಕುತ್ತಿಗೆ ಕಡಿದು ಕೊಲೆ ಮಾಡಿದ್ದಾನೆ. ಇನ್ನೊಬ್ಬ ಮಗ ಭಾಸ್ಕರ ತಪ್ಪಿಸಿಕೊಂಡು ಪಕ್ಕದ ಮನೆಗೆ ಓಡಿಹೋಗಿ ಅವರನ್ನು ಕರೆದುಕೊಂಡು ಬರುವ ಸಮಯದಲ್ಲಿ ರಾಮ ಮಠಾಠಿ ಇತನು ಮನೆಯ ಜಗುಲಿಯಲ್ಲಿ ಮರದ ಪಕಾಸಿಗೆ ಕುತ್ತಿಗಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.