ಯಲ್ಲಾಪುರ: ಬಸ್ ಕಂಡಕ್ಟರ್ ರೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಜೂನ್ .11ರಂದು ಕರೆದೊಯ್ದು, ಬಳಿಕ ಜೂ.13ಕ್ಕೆ ವಾಪಸ್ಸಾಗಿದ್ದ ಈತನಿಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಈತನಿಗೆ ಕ್ವಾರಂಟೈನ್ ವಿಧಿಸಲಾಗಿತ್ತು.
ಜೂ.16ಕ್ಕೆ ತಾಲೂಕಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಈತನ ಗಂಟಲು ದ್ರವವನ್ನು ಜೂ.18ರಂದು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಈತನಿದ್ದ KA 31 F 1577 ಸಾರಿಗೆ ಬಸ್ ನಲ್ಲಿ ಪ್ರಯಾಣಿಸಿದವರು ಯಾರಾದರೂ ಇದ್ದಲ್ಲಿ ತಾಲೂಕಾಡಳಿತ/ ಜಿಲ್ಲಾಡಳಿತ/ ಪೊಲೀಸ್ ಠಾಣೆಗೆ ವರದಿ ಮಾಡಿಕೊಳ್ಳುವಂತೆ ಕೋರಿದೆ.
ಈತ ಯಲ್ಲಾಪುರ ನಗರದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದು, ಸಾರಿಗೆ ನಿಗಮದ ಆರು ಮಂದಿ ಸಿಬ್ಬಂದಿ ಈತನೊಂದಿಗೆ ಒಂದೇ ರೂಮಿನಲ್ಲಿ ಇರುತ್ತಿದ್ದರು. ಸದ್ಯ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಈ ಆರೂ ಮಂದಿಗೆ ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ.