ಕುಮಟಾ:ಪಟ್ಟಣದ ನಾಗರಿಕರಿಗೆ ಪ್ರಕಟಣೆ (covid-19) ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸುವ ಕುರಿತಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಔಷಧಿ ಅಂಗಡಿ ಹೊರತುಪಡಿಸಿ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಅಂಗಡಿ ಮುಗಟ್ಟು ಇತರೆ ವಾಣಿಜ್ಯ ನಡೆಸಲು ಅವಕಾಶ ನೀಡಲಾಗಿದೆ.
ಸಂದರ್ಭದಲ್ಲಿ ಅಂಗಡಿಕಾರರಿಗೆ ಮತ್ತು ಸಾರ್ವಜನಿಕರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯ ಗೊಳಿಸಲಾಗಿದೆ. ತಪ್ಪಿದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪಟ್ಟಣದ ಅಂಗಡಿಕಾರಿಗೆ ಪುರಸಭೆಯಿಂದ ಉದ್ದಿಮೆ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ ತಿಳಿಸಿದ್ದಾರೆ.
ಇದು ತಾಲೂಕಾಡಳಿತ ಮತ್ತು ಪುರಸಭೆಯ ಸಾರ್ವಜನಿಕ ಪ್ರಕಟಣೆ