Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕುಮಟಾ ತಾಲೂಕಿನಲ್ಲಿ ದೃಢಪಟ್ಟಿದ ಕರೊನಾ ಸೋಂಕು ಪ್ರಕರಣದ ಬಗ್ಗೆ ಸಹಾಯಕ ಆಯುಕ್ತ ರಿಂದ ಸುದ್ದಿಗೋಷ್ಠಿ. ಈ ಬಗ್ಗೆ ಸಾರ್ವಜನಿಕರಿಗೆ ಉಂಟಾದ ಗೊಂದಲಗಳಿಗೆ ಸ್ವಷ್ಟನೆ

ಕುಮಟಾ: ಮಹರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಕುಮಟಾದ ಹೆರವಟ್ಟಾದ ಒಂದೆ ಕುಟುಂಬದ 4 ಜನರಿಗೆ ಕರೊನಾ ಸೋಂಕು ದೃಢಪಟ್ಟಿರುವುದು ತಾಲೂಕಿನ ಜನತೆಗೆ ಗೊಂದಲದ ಜೊತೆಗೆ ಸ್ವಲ್ಪ ಮಟ್ಟಿಗೆ ಆತಂಕ ವಾಗಿದೆ.


ಈ ಬಗ್ಗೆ  ಸಾರ್ವಜನಿಕರಿಗೆ ಉಂಟಾದ ಗೊಂದಲಗಳಿಗೆ ಸ್ವಷ್ಟನೆ ನೀಡಲು ಕುಮಟಾ ಸಹಾಯಕ ಆಯುಕ್ತರಾದ ಅಜೀತ್ ಎಮ್. ಅವರು  ಪತ್ರಿಕಾಗೋಷ್ಠಿಯಲ್ಲಿ ಮೇ 30 ರಂದು     ಕುಮಟಾದಲ್ಲಿ   ಪತ್ತೆಯಾದ ಕರೊನಾ ಸೋಂಕಿತರ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.


ಭಾನುವಾರ ದೃಢ ಪಟ್ಟ ಪ್ರಕರಣದಲ್ಲಿ ನಾಲ್ವರೂ ಪಿ೩೨೧೮, ಪಿ೩೨೧೯, ಪಿ೩೨೨೦, ಪಿ೩೨೨೧ ಇವರು ಮೇ. ೨೬ಕ್ಕೆ ಮಹಾರಾಷ್ಟ್ರದಿಂದ ಆಗಮಿಸಿದ್ದು ಅದೇ ದಿನ ಗಂಟಲುದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಭಾನುವಾರ ವರದಿ ಬಂದಿದೆ. ಇವರೆಲ್ಲರೂ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದವರು ಹೀಗಾಗಿ ಸೀಲ್​ಡೌನ್ ಅಥವಾ ಕಂಟೈನ್ಮೆಂಟ್ ಝೋನ್ ಮಾಡುವ ಅಗತ್ಯವಿಲ್ಲ. 

ತಾಲೂಕಿನಲ್ಲಿ ಈಗಾಗಲೇ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ  19 ಮಂದಿ ಹಾಗೂ ಎರಡನೇ ಹಂತದ ಸಂಪರ್ಕಕ್ಕೆ ಬಂದ 25 ಮಂದಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. ಸದ್ಯ ಸೋಂಕಿತರನ್ನು ಕಾರವಾರಕ್ಕೆ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ. ಸೋಂಕಿತರ ಸಂಖ್ಯೆ ತೀರಾ ಹೆಚ್ಚಾದರೆ ಅನುಕೂಲವಾಗಲೆಂದು ತಾಲೂಕಾಸ್ಪತ್ರೆಯಲ್ಲಿ 35 ಹಾಸಿಗೆಯ ಸುಸಜ್ಜಿತ ಪ್ರತ್ಯೇಕ ಕರೊನಾ ವಾರ್ಡ ಸಿದ್ಧವಾಗಿದೆ. ಇದರಿಂದ ಆಸ್ಪತ್ರೆಗೆ ಇತರ ಚಿಕಿತ್ಸೆಗೆ ಬರುವವರು ಯಾವುದೇ ಆತಂಕವಿಲ್ಲದೇ ಬಂದು ಹೋಗಬಹುದು ಎಂದರು


ಜೂನ್ 8 ರಿಂದ ಶಾಲಾ ಕಾಲೇಜು ಹೊರತುಪಡಿಸಿ ಉಳಿದಿದ್ದೆಲ್ಲವೂ ತೆರೆಯಲಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಸಾರ್ವಜನಿಕರು ಜಾಗೃತರಾಗಿ ಕರೊನಾ ವಿರುದ್ಧದ ಹೋರಾಟದಲ್ಲಿ ಸ್ವಯಂ ಪ್ರೇರಣೆಯಿಮದ ಪಾಲ್ಗೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಹೊರ ರಾಜ್ಯಗಳಿಂದ ಕಳ್ಳದಾರಿಯಲ್ಲಿ ಊರಿಗೆ ಬಂದವರ ಬಗ್ಗೆ ಸ್ಥಳೀಯರೇ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.