ಕುಮಟಾ: ವಕ್ಕನಳ್ಳಿ ಯಲ್ಲಿ ಮಳೆ ನೀರು ಹರಿದು ಹೊಗುವ ಸ್ಥಳದಲ್ಲಿ ರುಂಡ ಇಲ್ಲದ ಮಹಿಳೆಯ ಶವ ತೇಳಿ ಬಂದಿತ್ತು ಬೆಳಿಗ್ಗೆ ಸೊಪ್ಪುತರಲು ಹಳ್ಳದ ದಾರಿಯಲ್ಲಿ ಸಾಗುತ್ತಿದ್ದ ಗ್ರಾಮಸ್ಥರು ಶವ ನೋಡಿ ಗಾಬರಿಗೊಂಡು ಕುಮಟಾ ಪೋಲಿಸ್ ಠಾಣೆಗೆ ವಿಷಯ ತಿಳಿಸಿದರು ಸ್ಥಳಕ್ಕೆ ಆಗಮಿಸಿದ ಪೋಲಿಸರು ಶವದ ಗುರುತಿಸಲು ಪಡುವಾಗ ಇದು ಸ್ಥಳೀಯ ಮಹಿಳೆಯ ಶವ ಎಂದು ಶಂಕೆ ವ್ಯಕ್ತಪಡಿಸಿದ್ದರು ನಂತರ ಕಳೆದ 27 ದಿನಗಳ ಹಿಂದೆ ಕುಮಟಾದ ಹಳಕಾರ ನಿವಾಸಿ ಕೈರುನಾ ನಿಸಾ ವರ್ಷ 81 ಈ ಮಹಿಳೆ ರಾತ್ರಿ ಮನೆಯಿಂದ ಹೊರಗೆ ಹೊದಾಗ ನಾಪತ್ತೆ ಆಗಿರುವ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲೆ ಆಗಿತ್ತು ಹಾಗಾಗಿ ಇಂದು ದೊರೆತ ಶವ ಗುರುತಿಸಲು ಹಳಕಾರದ ಕೈರುನಾ ವರ ಕುಟುಂಬದವರಿಗೆ ಸ್ಥಳಕ್ಕೆ ಬರಲು ಪೊಲೀಸರು ತಿಳಿಸಿದಾಗ ಕುಟುಂಬವರು ಮಹಿಳೆ ಹಾಕಿರುವ ಬಟ್ಟೆಗಳನ್ನು ಗುರುತಿಸಿ ಇದು ಕೈರುನಾ ನಿಸಾವರ ಶವ ಎಂದು ಗುರುತಿಸಿದರು.
ಸ್ಥಳದಲ್ಲಿ ಕುಮಟಾ ಠಾಣೆಯ ಸಿಪಿಐ ಪರಮೇಶ್ವರ ಗುನಗಾ ಪಿಎಸ್ಐ ಆನಂದಮೂರ್ತಿ ಕೈಂ ಪಿಎಸ್ಐ ಸುದಾ ಹರಿಕಂತ್ರ ಪ್ರೋಪೆಸರಿ ಪಿಎಸ್ಐ ರವಿ ನಾಗರಾಜ ನಾಯ್ಕ ತಿಮ್ಮಣ್ಣ ನಾಯಕ ಸಂಜಿನ ನಾಯ್ಕ ಮಾರುತಿ ನಾಯ್ಕ ಹಾಗು ವಾರ್ಡಿನ ಸದಸ್ಯ ತುಳುಸು ಗೌಡ ಹಾಜರಿದ್ದು ಶವವನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಯಿತು