ಕುಮಟಾ: ಮಾಸೂರಿಗೆ ಆಗಮಿಸಿದ ಕುಮಟಾದ ತ್ರಿರತ್ನಗಳಾಗಿರುವ ಶ್ರೀ ಚೇತನ್ ಶೇಟ್, ಯೋಗೇಶ್ ಕಾಮತ್ ಮತ್ತು ಅಮಿತ್ ಶಾನಭಾಗ್ ಮಾಸೂರು ಮತ್ತು ಕಲಾಭಾವಿಯ ಸುಮಾರು 16 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಕೊರೋನಾ ಲಾಕ್ ಡೌನ್ ನಿಂದ ಯಾವುದೇ ಆರ್ಥಿಕ ನೆರವಿಲ್ಲದೆ ಸಂಕಷ್ಟದಲ್ಲಿರುವ ಅಂಗವಿಕಲರಿಗೆ, ಬಡ ವಿಧವೆಯರಿಗೆ, ಅನಾರೋಗ್ಯ ಪೀಡಿತರಿಗೆ ನಮ್ಮ ಕುಮಟಾದ ಯುವ ಉದ್ಯಮಿಗಳು ನೆರವು ನೀಡಿರುವುದು ತುಂಬಾ ಉತ್ತಮವಾದ ಕಾರ್ಯ.
ಶ್ರೀ ಗಣಪತಿ ಪಟಗಾರ ಹಣ್ಣೇಮಠ ಇವರು ದಾನಿಗಳಿಗೆ ಮಾಸೂರಿನಲ್ಲಿ ಕಿಟ್ ವಿತರಣೆ ಮಾಡಬೇಕೆಂದು ವಿನಂತಿಸಿಕೊಂಡರು. ಮಂಜುನಾಥ ರಾಮ ಪಟಗಾರ (ಟೇಲರ್), ಮಧುಕರ್ ಪಟಗಾರ ಮತ್ತು ರಮೇಶ ವಿ. ನಾಯ್ಕ, ಪಾಂಡು ಪಟಗಾರ ಸಹಕರಿಸಿದರು. ಅಲ್ಲದೇ ದಾನಿಗಳಿಗೆ ಧನ್ಯವಾದ ಸಲ್ಲಿಸಿ, ಮುಂದಿನ ದಿನಗಳಲ್ಲಿ ನಮ್ಮ ಊರಿನ ಜನತೆಗೆ ತಮಗೆ ಇನ್ನೂ ಹೆಚ್ಚಿನ ಸೇವೆ ನೀಡುವಂತೆ ಶ್ರೀ ಬಬ್ರುದೇವರು ಶಕ್ತಿ ನೀಡಲಿ ಎಂದು ಫಲಾನುಭವಿಗಳು ಧನ್ಯತಾ ಭಾವದಿಂದ ಹರಸಿದರು.