ಕುಮಟಾ: ಬಿಜೆಪಿ ಕುಮಟಾ ಮಂಡಲದ ವತಿಯಿಂದ ಕೂಜಳ್ಳಿ ಗ್ರಾಮದ ಮಾರುತಿ ಬೀರಾ ಹೆಗಡೆ ಇವರ ಮನೆಗೆ ಮಂಡಲ ಅಧ್ಯಕ್ಷರಾದ ಹೇಮಂತಕುಮಾರ್ ಗಾಂವಕರ್, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಕುಮಾರ್ ಮಾರ್ಕಂಡೇಯ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾದ ಶ್ರೀಧರ ಭಟ್ ಕೂಜಳ್ಳಿ, ಬಿಜೆಪಿ ಯುವ ಮುಖಂಡರಾದ ಗಣೇಶ ನಾಯಕ ವನ್ನಳ್ಳಿ ಹಾಗೂ ನವೀನಕುಮಾರರವರು ಭೇಟಿ ನೀಡಿದರು.
ಕೂಜಳ್ಳಿ ಗ್ರಾಮದ ಮಾರುತಿ ಬೀರಾ ಹೆಗಡೆ
ಪರೇಶ್ ಮೇಸ್ತಾ ಗಲಾಟೆ ಪ್ರಕರಣದ ಸಂದರ್ಭದಲ್ಲಿ ತಮ್ಮ ಒಂದು ಕಾಲಿನ ಸಾಮರ್ಥ್ಯ ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆದರು ಸರಿಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೊಗಲು ಹಣವಿಲ್ಲದೇ ಅಸಾಯಕರಾಗಿ ಬಿಜೆಪಿ ಕಛೇರಿ ಕುಮಟಾಕ್ಕೆ ಕರೆ ಮಾಡಿ ಸಹಾಯ ಕೇಳಿದ ಕಾರಣ ತಿಳಿದು ಅವರ ಕುಟುಂಬದ ಕಷ್ಟದ ಬಗ್ಗೆ ಮಾಹಿತಿ ಪಡೆದು, ಬಿಜೆಪಿ ಕುಮಟಾ ಮಂಡಲದ ವತಿಯಿಂದ 5000/- ರೂಪಾಯಿ ಪ್ರಾಥಮಿಕವಾಗಿ ನೀಡಿದರು. ಇನ್ನೂ ಮುಂದಿನ ಚಿಕಿತ್ಸೆಗಾಗಿ ದಾನಿಗಳಿಂದ ಹಾಗೂ ಸರ್ಕಾರದ ಮಟ್ಟದಲ್ಲಿ ಸ್ಥಳೀಯ ಶಾಸಕರಾದ ದಿನಕರ ಕೆ ಶೆಟ್ಟಿ ಅವರ ಸಹಕಾರದೊಂದಿಗೆ ಮಾಡುವುದಾಗಿ ಆತ್ಮಸ್ಥೈರ್ಯ ತುಂಬಿ ಅಗತ್ಯ ದಿನಬಳಕೆಯ ಸಾಮಗ್ರಿಗಳನ್ನು ನೀಡಿದರು.