Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕುಮಟಾದ ಅಳಕೋಡ ಪಂಚಾಯತಕ್ಕೆ ಸಚಿವರ ಭೇಟಿ ಈ ಭಾಗದಲ್ಲಿ ನಡೆಯಬೇಕಿರುವ ಅಭಿವೃದ್ದಿ ಕಾಮಗಾರಿಗಳ ಮನವಿ ಸಲ್ಲಿಸಿದ ಜಿ.ಪಂ ಸದಸ್ಯರಾದ ಗಜಾನನ ಪೈ

    ಕುಮಟಾ:   ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಂ ಹೆಬ್ಬಾರ ಅವರು ಕುಮಟಾದಕ್ಕೆ ಭೇಟಿ ಕೊಟ್ಟು ಸಂದರ್ಭದಲ್ಲಿ ಮೂರೂರು ಜಿ.ಪಂ ವ್ಯಾಪ್ತಿಯ ಅಳಕೋಡ ಪಂಚಾಯತ ಕಛೇರಿಗೆ ಭೇಟಿಕೊಟ್ಟು ಈ ಭಾಗದ ಹಲವು ಕಾಮಗಾರಿಗಳನ್ನ ವೀಕ್ಷಿಸಿದರು.ಈ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜಿ.ಪಂ ಸದಸ್ಯರಾದ  ಗಜಾನನ ಪೈ ಅವರಿಂದ ಮನವಿ ಸ್ವೀಕರಿಸಿ ಆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
   ಮೂರೂರು ಜಿಲ್ಲಾಪಂಚಾಯತ್ ಕ್ಷೇತ್ರದ ಸದಸ್ಯರಾದ  ಗಜಾನನ ಪೈಯವರು   ಹಲವು ವರ್ಷದ ಈ ಭಾಗದ ಕುಡಿಯುವ ನೀರಿನ‌ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಚಂಡಿಕಾ ಹಾಗೂ ಅಘನಾಶಿನಿ ನದಿಯ ಸಂಗಮ ಸ್ಥಳದಲ್ಲಿ ಕಿಂಡಿ ಆಣೆಕಟ್ಟು. ಹಾಗೂ ಅಜೀರ್ಣಾವಸ್ಥೆಯಲ್ಲಿರುವ ಉಪ್ಪಿನಪಟ್ಟಣದ ಕಮಲದ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಸಚಿವರಲ್ಲಿ ಮನವಿ ಸಲ್ಲಿಸಿದರು. 
ಈ ಎರಡು ಕಾಮಗಾರಿಗಳು ಮಂಜೂರಿಯಾದಲ್ಲಿ ಈ ಭಾಗದ ಜನರ ಬಹು ವರ್ಷಗಳ ಸಮಸ್ಯೆಯಾದ ಕುಡಿಯುವ ನೀರಿನ ಸಮಸ್ಯೆ ದೂರವಾಗುವದು ಖಚಿತ.ಇನ್ನು ಚಂಡಿಕಾ ಹಾಗೂ ಅಘನಾಶಿನಿ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಿಸಿಲು ಯೋಚಿಸಿದ ಕಿಂಡಿ ಆಣೆಕಟ್ಟು ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ 

 ಅರ್ದಕ್ಕೂ ಹೆಚ್ಚು ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವದು ನಿಶ್ಚಿತವಾಗಿದೆ ಎಂದು ಹೇಳಿದರು. ಈ ಭಾಗದಲ್ಲಿನ ಕಾಮಗಾರಿಗಳ ಬಗ್ಗೆಯೂ ಚರ್ಚಿಸಲಾಯಿತು..ಈ ಸಂಧರ್ಭದಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ,  ವಿ.ಎಮ್ ಜಾಲಿಸತ್ಗಿ. ಅನಂತ ಶಾನಭಾಗ ಮುಂತಾದ ಪಕ್ಷದ ಪದಾದಿಕಾರಿಗಳೂ.ಪಂಚಾಯತ ಸದಸ್ಯರೂ, ಊರಿನ ಗಣ್ಯರೂ ಉಪಸ್ಥಿತರಿದ್ದರು..