ಕಾರವಾರ: ಜಿಲ್ಲೆಯಲ್ಲಿ ಇಂದು ಒಟ್ಟು 6 ಕೋವಿಡ್- 19 ಪ್ರಕರಣಗಳು ಪತ್ತೆಯಾಗಿದ್ದು ಇಂದಿನ ಬುಲಟಿನ್ ನಲ್ಲಿ ಬರುವ ಸಾಧ್ಯತೆಗಳು ದಟ್ಟವಾಗಿದೆ.
ಯಲ್ಲಾಪುರದಲ್ಲಿ ಮೂರು, ಭಟ್ಕಳ ಒಂದು ಮುಂಡಗೋಡ ಒಂದು ಹಾಗೂ ಹೊನ್ನಾವರದಲ್ಲಿ ಒಂದು ಪ್ರಕರಣಗಳು ಇಂದು ಪತ್ತೆಯಾಗಿವೆ.
ಯಲ್ಲಾಪುರದಲ್ಲಿ ಓರ್ವಳು ಈ ಹಿಂದೆ ಸೋಂಕಿತನಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವಳಾಗಿದ್ದು, ಈಕೆ ಕೂಡ ಮುಂಬೈನಿಂದ ತಿಂಗಳ ಹಿಂದೆ ವಾಪಸ್ಸಾಗಿದ್ದಳು. ಮುಂಡಗೋಡದ ಸೋಂಕಿತ ದೆಹಲಿಯಿಂದ ಟಿಬೆಟಿಯನ್ ಕಾಲೊನಿಗೆ ವಾಪಸ್ಸಾದವರಾಗಿದ್ದು, ಉಳಿದೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದಾರೆ. ಇವರ ಗಂಟಲು ದ್ರವದ ತಪಾಸಣೆಯಲ್ಲಿ ಫಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ 114 ಸೊಂಕಿತ ಪ್ರಕರಣ ಇದ್ದು ಆರು ಜನರು ಸೇರಿದಲ್ಲಿ 120 ಪ್ರಕರಣದಾಖಲಾಗಲಿದೆ