ಕಾರವಾರ: ಜಿಲ್ಲೆಯಲ್ಲಿ ಇಂದು 9 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಇದ್ದು
ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಐದು ಪ್ರಕರಣ ಎಂದು ಉಲ್ಲೇಖಿಸಿದ್ದು, ನಾಳೆ ಉಳಿದ ನಾಲ್ಕು ಪ್ರಕರಣಗಳು ಪ್ರಕಟವಾಗಲಿದೆ ಎಂಬ ಮಾಹಿತಿ ಇದೆ.
ಸೋಂಕು ದೃಢಪಟ್ಟವರಲ್ಲಿ ಹಳಿಯಾಳ ಮೂಲದ 12 ವರ್ಷದ ಬಾಲಕ ಹಾಗೂ 45 ವರ್ಷದ ಪುರುಷ ತಮಿಳುನಾಡಿನಿಂದ ಬಂದವರಾಗಿದ್ದು, 9 ವರ್ಷದ ಬಾಲಕಿ ಥಾಣೆಯಿಂದ ಬಂದವಳಾಗಿದ್ದಾಳೆ. ಜೊಯಿಡಾದ 24 ವರ್ಷದ ಯುವತಿ ಥಾಣೆಯಿಂದ ಬಂದವಳಾಗಿದ್ದು, ಶಿರಸಿಯ 63 ವರ್ಷದ ಯುವತಿ ಮುಂಬೈನಿಂದ ಬಂದವರಾಗಿದ್ದಾರೆ. ಮಹಾರಾಷ್ಟ್ರದಿಂದ ವಾಪಸ್ಸಾದ ಕುಮಟಾದ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಓರ್ವ 33 ವರ್ಷದ ಪುರುಷನಾಗಿದ್ದಾನೆ. ಇನ್ನು ಕಾರವಾರದಲ್ಲಿ ಥಾಣೆಯಿಂದ ವಾಪಸ್ಸಾಗಿದ್ದ 39 ವರ್ಷದ ಪುರುಷ ಹಾಗೂ 35 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇವರಲ್ಲಿ ಏಳು ಜನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದು, ಇಬ್ಬರು ಮಾತ್ರ ಹೋಂ ಕ್ವಾರಂಟೈನ್ ನಲ್ಲಿದ್ದ ವೇಳೆ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ.