ಕಾರವಾರ:- ಕರೋನಾ ಸೊಂಕಿನಿಂದ ಗುಣಮುಖರಾದ ಜಿಲ್ಲೆಯ ಆರು ಜನರನ್ನು ಇಂದು ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡನಿಂದ ಬಿಡುಗಡೆ ಮಾಡಲಾಯಿತು.
ಮೇ 18 ರಂದು ದಾಖಲಾಗಿದ್ದ 28 ವರ್ಷದ p1201ಸಂಖ್ಯೆಯ ಮಹಿಳೆ ,36 ವರ್ಷದ p-1200 ಸಂಖ್ಯೆಯ ಮಹಿಳೆ, 40 ವರ್ಷದ p-1202 ಸಂಖ್ಯೆಯ ಪುರುಷ, ಕಾರವಾರದ ಮಾಜಾಳಿಯ 37 ವರ್ಷದ p-1232 ಸಂಖ್ಯೆಯ ಪುರುಷ,ಭಟ್ಕಳದ 27ವರ್ಷದ p-1199 ಸಂಖ್ಯೆಯ ಪುರುಷ , ಮೇ.14 ರಂದು ದಾಖಲಾಗಿದ್ದ ಕುಮಟಾ ಮೂಲದ 26 ವರ್ಷದ p-906 ಕ್ರಮಸಂಖ್ಯೆಯ ಪುರುಷ ಇಂದು ಬಿಡುಗಡೆಯಾಗಿದ್ದಾರೆ.ಈ ಮೂಲಕ ಸೊಂಕಿತರ ಸಂಖ್ಯೆ 32 ಕ್ಕೆ ಇಳಿಕೆಯಾಗಿದೆ.