ಕಾರವಾರ: ಕೊರೋನಾ ಕೋವಿಡ್ 19 ಸಾಂಕ್ರಾಮಿಕ ತಡೆಗೆ ಜಿಲ್ಲೆಯಲ್ಲಿ ಜೂನ್ 30 ರವರೆಗೆ ಲಾಕ್ ಡೌನ್ ಅವಧಿ ಮುಂದುವರೆಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಅವಧಿಯನ್ನ ಬದಲಿಸಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಆದೇಶಿಸಿದ್ದಾರೆ.
ಜೂನ್ 30 ರವರೆಗೆ ರಾತ್ರಿ 9 ಘಂಟೆಯಿಂದ ಬೆಳಿಗ್ಗೆ 5 ರವರೆಗೆ ನಿಷೇಧಾಜ್ಞೆ ಮುಂದುವರೆಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಯಾರು ಹೊರಗಡೆ ತಿರುಗಾಡಬಾರದು. ನಿಷೇದಿತ ಅವಧಿಯಲ್ಲಿ ವೈದ್ಯಕೀಯ ಕಾರಣ ಹೊರತುಪಡಿಸಿ ಇನ್ನಿತರ ಯಾವುದೇ ಕಾರಣಕ್ಕೂ 65 ವರ್ಷ ಮೇಲ್ಪಟ್ಟವರು, 10 ವರ್ಷ ಒಳಗಿನ ಮಕ್ಕಳು, ಹಾಗೂ ಅನಾರೋಗ್ಯಕ್ಕೆ ಓಳಗಾದವರು ಮನೆಯಿಂದ ಹೊರಗೆ ಬರತಕ್ಕದಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಆದೇಶ ನೀಡಿದ್ದಾರೆ.