ಕುಮಟಾ: ಗಾಳಿ ಮಳೆಗೆ ಮರವೊಂದು ಧರೆಗೆ ಉರುಳಿ ಯಾಣದ ರಸ್ತೆ ಸಂಚಾರ ಬಂದ್ ಆಗಿತ್ತು. ಇಂದು ಎಸ್.ಎಸ್.ಎಲ್,ಸಿ ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳ ಬಸ್ ಚಾಲಕ ಜಗದೀಶ ಪಟಗಾರ ಹಾಗು ನಿರ್ವಾಹಕ ಭಾಸ್ಕರ ಪಟಗಾರ ಅವರೇ ಕಡಿದು ಸುರಕ್ಷಿತವಾಗಿ ಯಾವುದೇ ಸಮಸ್ಯೆಯಿಲ್ಲದೇ ವಿಧ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ತಲುಪಿಸಿದ್ದು, ಸಹಕರಿಸಿದ್ದಾರೆ. ಇವರ ಉತ್ತಮ ಸಾಮಾಜಿಕ ಕಾರ್ಯಕ್ಕೆ ಹಾಗೂ ಸಮಯ ಪ್ರಜ್ಞೆಗೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇವರ ಈ ಉತ್ತಮ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಅಭಿನಂದನೆಯ ಸುರಿಮಳೆ ಸುರಿದಿದ್ದಾರೆ.