Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಜಿಲ್ಲೆಯಲ್ಲಿ ಡೆಡ್ಲಿ ಕೊರೋನಾ ರಣಕೇಕೆ ಕುಮಟಾದಲ್ಲಿ ನಾಳೆಯಿಂದ ಮಧ್ಯಾಹ್ನ ಲಾಕ್ ಡೌನ್

ಕುಮಟಾ : ಜಿಲ್ಲೆಯಲ್ಲಿ ಇಂದು ಕೊರೋನಾ ಅಟ್ಟಹಾಸ ಮುಂದುವರೆದ್ದಿದ್ದು  ಒಟ್ಟು ೩೩ ಜನರಲ್ಲಿ ಕೊರೋನಾ ದೃಢಪಟ್ಟಿದೆ ಎನ್ನುವ ಮಾಹಿತಿ ಇದೆ ಎನ್ನಲಾಗಿದೆ. ಭಟ್ಕಳದಲ್ಲಿ  ೧೭, ಕಾರವಾರದಲ್ಲಿ ೫, ದಾಖಲಾಗಿದ್ದು  ಕುಮಟಾ, ಹೊನ್ನಾವರ, ಹಳಿಯಾಳ, ಹಾಗೂ ಶಿರಸಿಯಲ್ಲಿ ತಲಾ ೨ ಪ್ರಕರಣ ಮತ್ತು ಅಂಕೋಲಾ, ಮುಂಡಗೋಡ, ಜೋಯಿಡಾದಲ್ಲಿ ತಲಾ ೧ ಪ್ರಕರಣ ಬೆಳಕಿಗೆ ಬಂದಿದೆ ಇದರಿಂದ  ಜನತೆ ಆತಂಕವಾಗಿದೆ


ಕುಮಟಾದಲ್ಲಿ ಒಂದು ವಾರಗಳ ಕಾಲ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ಚಿಂತನೆ


ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕುಮಟಾದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಸರ್ವಪಕ್ಷ ಸಭೆಯನ್ನ ನಡೆಸಲಾಯಿತು.ಸಭೆಯಲ್ಲಿ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ವಯಂ ಲಾಕ್ ಡೌನ್ ಮಾಡಲು  ತಿರ್ಮಾನಿಸಲಾಯಿತು. ಒಂದುವಾರಗಳ ಕಾಲ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ಚಿಂತಿಸಲಾಗಿದೆ.

ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಿ ಬೆಳಿಗ್ಗೆ ವೇಳೆ ಮಾತ್ರ ವ್ಯಾಪಾರ ವ್ಯವಹಾರ ಚಟುವಟಿಕೆ ನಡೆಸಿ ಪ್ರತಿದಿನ ಮಧ್ಯಾಹ್ನ ಎರಡು ಘಂಟೆಯಿಂದಲೇ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.