Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕರೋನಾ ಸೋಂಕಿತರ ವಿವರ ಬಚ್ಚಿಟ್ಟರೆ ಅವರ ಮೇಲೆ ಕಾನೂನಿನ ಕ್ರಮ : ಕುಮಟಾ ಉಪವಿಭಾಗಾಧಿಕಾರಿ

ಕುಮಟಾ : ಕೊರೋನಾ ಕಾಯಿಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ  ಹೆಚ್ಚಾಗುತ್ತಿದ್ದು ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ ಕ್ಯೆಗೊಳ್ಳುತ್ತಿದೆ. ಆದರೆ  ಕೊರೋನಾ ಕಾಯಿಲೆ ಧೃಡ ಪಟ್ಟ ಸೋಂಕಿತರು ತಾವು ಯಾರ ಸಂಪರ್ಕ ಹೊಂದಿದ್ದಾರೆ ಹಾಗೂ ಅವರ ಪ್ರಯಾಣದ ವಿವರಗಳನ್ನು ಬಚ್ಚಿಟ್ಟು ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಥವಾ ಮುಚ್ಚಿಟ್ಟಲ್ಲಿ ಅವರು ಗುಣಮುಖರಾಗಿ ಬಂದ ನಂತರ ಎಪ್ ಅಯ್ ಆರ್ (ಪ್ರಕರಣ ) ದಾಖಲಿಸಲಾಗುವುದು
ಎಂದು ಉಪ ವಿಭಾಗಾಧಿಕಾರಿ ಎಮ್ ಅಜಿತ್ ಅವರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.


ಈಗಾಗಲೇ ಕೊರೋನಾ ಕಾಯಿಲೆ ದೃಡಪಟ್ಟ ಕೆಲ ಸೋಂಕಿತರು ತಮ್ಮ ಸಂಪರ್ಕ್ ಹಾಗೂ ಪ್ರಯಾಣದ ಕುರಿತು ಸುಳ್ಳು ಮಾಹಿತಿ ನೀಡಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯವರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದಾರೆ. ಇದರಿಂದಾಗಿ ಕಾಯಿಲೆ ಮೂಲ ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ನ್ಯೆಜ ಸಂಗತಿ ಮುಚ್ಚಿಡುವ ಕಾರಣ ರೋಗ ಇನ್ನೊಬ್ಬರಿಗೆ ಹರಡಲು ಕಾರಣ ವಾಗುತ್ತಿದ್ದಾರೆ. ಕಾರಣ ಯಾವುದೇ ಕೊರೋನಾ ದೃಡಪಟ್ಟ ಸೋಂಕಿತರು ತಮ್ಮ ಎಲ್ಲಾ ವಿವರಗಳನ್ನು ಪಾರದರ್ಶಕವಾಗಿ ತಿಳಿಸಬೇಕು ಎಂದು ಹೇಳಿದರು.
.ಅಲ್ಲದೆ ಕೊರೋನಾ ಕಾಯಿಲೆ ನಿಯಂತ್ರಣ ಕುರಿತು ತಾಲೂಕು ಆಡಳಿತ ನಿಘಾವಹಿಸಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡಬಾರದು.ಚಿಕಿತ್ಸೆ ಸಂಬಂಧ ಎಲ್ಲಾ ವ್ಯೆಧ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಮಾಹಿತಿ ನೀಡಿದರು.