ಕುಮಟಾ: ತಾಲ್ಲೂಕಿನಲ್ಲಿ ಭಾನುವಾರದ ಲಾಕ್ ಡೌನ್ ಗೆ ಅಂಗಡಿಕಾರರಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಔಷಧಿ ಅಂಗಡಿ ಹಾಗೂ ಪೆಟ್ರೋಲ್ ಬಂಕ್ ಹೊರತಾಗಿ ಉಳಿದೆಲ್ಲಾ ವಹಿವಾಟುಗಳು ಸ್ಥಗಿತಗೊಂಡಿತು.
ಪಟ್ಟಣ ಸೇರಿದಂತೆ ಮಿರ್ಜಾನ, ಹೆಗಡೆ, ಕೂಜಳ್ಳಿ , ಬಡಾಳ ಕತಗಾಲ, ಅಘನಾಶಿನಿ, ಧಾರೇಶ್ವರ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪೊಲೀಸ್ ಇಲಾಖೆಯು ಭಾರೀ ಮಳೆಯ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂತು. ಸಿಪಿಐ ಪರಮೇಶ್ವರ ಗುನಗಾ ಹಾಗೂ ಪಿಎಸ್ಸೈ ಆನಂದಮೂರ್ತಿ ಅವರು ಪಟ್ಟಣದೆಲ್ಲೆಡೆ ಕಣ್ಗಾವಲು ಇಟ್ಟಿದ್ದರು.