ಅಂಕೋಲಾ: ತಾಲೂಕಿನ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸುರಿದ ಬಾರಿ ಮಳೆಯಿಂದ ಗಂಗಾವಳಿ ನದಿ ನೀರಿನ ಮಟ್ಟ ವಿಪರೀತ ಏರಿಕೆಯಾಗಿದೆ.
ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಮಳೆಯ ಆರ್ಭಟಕ್ಕೆ ಜನಜೀವನ ತತ್ತರವಾಗಿದ್ದು,
ಇದರಿಂದಾಗಿ ನದಿ ತಟದಲ್ಲಿ ಇರುವ 10 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿ ಅಪಾರ ಹಾನಿ ಸಂಭವಿಸಿದೆ.
ಈ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ,ಗುಳ್ಳಾಪುರ ಹಳವಳ್ಳಿ ಮಾರ್ಗಮಧ್ಯದ ಸೇತುವೆಯೊಂದು,ಉಕ್ಕೇರಿದ ಗಂಗಾವಳಿ ನದಿ ಹರಿವಿನ ರಭಸಕ್ಕೆ,ಭಾಗಶಹ ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಳೆದೆರಡು ವರ್ಷದ ಹಿಂದೆ ಸುರಿದ ಮಳೆ ಯಿಂದ ನದಿಯ ರಭಸಕ್ಕೆ ರಾಮನಗುಳಿ ಯ ಬಳಿಯ ತೂಗು ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಈಗ
ಗುಳ್ಳಾಪುರ ಹಳವಳ್ಳಿ ಮಾರ್ಗಮಧ್ಯದ ಸೇತುವೆಯೊಂದು, ರಭಸಕ್ಕೆ,ಭಾಗಶಹ ಕೊಚ್ಚಿಹೋಗಿದ್ದು ಇದರಿಂದ ಹಳವಳ್ಳಿ, ಕಮ್ಮಾಣಿ, ಶೇವಕಾರ ಸೇರಿದಂತೆ ಹತ್ತಾರು ಹಳ್ಳಿಗಳ 3000 ಕ್ಕೂ ಹೆಚ್ಚು ಜನ ರಸ್ತೆ ಸಂಪರ್ಕ ಇಲ್ಲದೇ ಅತಂತ್ರ ವಾಗುವಂತೆ ಆಗಿದೆ.
ಈ ಗ್ರಾಮದ ಜನರು, ಸಂಪರ್ಕ ಕ್ಕೆ ಬದಲಿ ಮಾರ್ಗವಾಗಿ ಮಳಲಗಾಂವ್ ಮೂಲಕ ಸುತ್ತಿಬಳಸಿ ಸಾಗಬಹುದಾದರೂ , ಮಳಲಗಾಂವ್ ಸೇತುವೆ ದುಸ್ಥಿತಿಯಲ್ಲಿದೆ ಮತ್ತು ಈ ಸಂದರ್ಭದಲ್ಲಿ ಈ ಸೇತುವೆ ಮೇಲಿನ ಪ್ರಯಾಣಅತ್ಯಂತ ಅಪಾಯಕಾರಿ ಎನ್ನುವುದು ಕೆಲ ಸ್ಥಳೀಯರ ಅಭಿಪ್ರಾಯ ವಾಗಿದೆ.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ನಿರ್ದೇಶನದಲ್ಲಿ ತಾ.ಪಂ ಮಾರ್ಗದರ್ಶನದಂತೆ ,ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ,ಈಗಾಗಲೇ ಕೋನಾಳ,ಕಲ್ಲೇಶ್ವರ,ವೈದ್ಯಹೆಗ್ಗಾರ ಮತ್ತಿತರೆಡೆಯ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಕಾಳಜಿ ಕೇಂದ್ರಗಳನ್ನು ತೆರೆದು ನಾಗರಿಕ ಸುರಕ್ಷತೆಗೆ ಒತ್ತು ನೀಡಲಾಗಿದೆ.