ಕುಮಟಾ: ಅತಿ ವೇಗದಿಂದ ಬಂದ ಟ್ಯಾಂಕರ್ ವೊಂದು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಿರ್ಜಾನ ಸಮೀಪ ಸಂಭವಿಸಿದೆ.
ಟ್ಯಾಂಕರ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಹೌದು, ಅತಿ ವೇಗದಿಂದ ಬಂದ ಟ್ಯಾಂಕರ್ ವೊಂದು ಬೈಕ್ ಗೆ ಗುದ್ದಿದೆ. ಈ ವೇಳೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಕಿಮಾನಿ ಮೂಲದ ರಮೇಶ ಹರಿಕಂತ್ರ ಎಂದು ಗುರುತಿಸಲಾಗಿದ್ದು ಟ್ಯಾಂಕರ್ ಗುದ್ದಿದ ರಭಸಕ್ಕೆ ಅಪಘಾತವಾದ ಸ್ಥಳದಿಂದ ಸುಮಾರು ಐದಾರು ಕಿಲೋಮೀಟರ್ ದೂರ ಬಂದು ಬೈಕ್ ಬಿದ್ದಿದೆ ಎನ್ನಲಾಗಿದೆ.
ಅಲ್ಲಿಯ ವರೆಗೂ ಬೈಕ್ ನ್ನು ಟ್ಯಾಂಕರ್ ತಳ್ಳಿಕೊಂಡೆ ಬಂದಿದೆ ಎನ್ನಲಾಗಿದ್ದು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ತಮಿಳುನಾಡಿನ ಮೂಲದಾಗಿದ್ದು TN52 A9911ವಾಹನ ನೋಂದಣಿ ಹೊಂದಿದೆ.ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.