ಕಾರವಾರ: ಉತ್ತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯ ಅತ್ಯಂತ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡು ತಮ್ಮ ಕಾರ್ಯವೈಖರಿ ಮೂಲಕ ಜನರ ಮೆಚ್ಚುಗೆ ಗಳಿಸಿದರು.
ಈಗ ಜಿಲ್ಲೆಯ ನೂತನ ಎಸ್ ಪಿ ಯಾಗಿ ವರ್ತಿಕಾ ಕಟಿಯಾರ್ ನೇಮಕಗೊಂಡಿದ್ದಾರೆ.ಇನ್ನು ಜಿಲ್ಲೆಯ ಮಟ್ಟಿಗೆ ನೋಡುವುದಾದರೆ ವರ್ತಿಕಾ ಕಟಿಯಾರ್ ಮೊದಲ ಮಹಿಳಾ ಎಸ್.ಪಿಯವರ ನೇಮಕವಾದಂತಾಗಿದೆ.
ತಕ್ಷಣದಿಂದಲೇ ಬರುವಂತೆ ಈ ಸರಕಾರ ಆದೇಶ ಹೊರಡಿಸಿದೆ. ಸದ್ಯಕ್ಕೆ ಶಿವಪ್ರಕಾಶ್ ದೇವರಾಜು ಅವರಿಗೆ ಯಾವುದೇ ಸ್ಥಾನಕ್ಕೆ ನಿಯೋಜಿಸಿಲ್ಲ ಎನ್ನಲಾಗಿದೆ. ಸರ್ಕಾರದ ಆದೇಶದ ಹಿನ್ನಲೆಯಲ್ಲಿ ನೂತನ ಎಸ್ ಪಿಯಾಗಿ ವರ್ತಿಕಾ ಕಟಿಯಾರ್ ಅಧಿಕಾರ ಸ್ವೀಕರಿಸಲಿದ್ದಾರೆ.
ಸದ್ಯ ಇವರು ರಾಜ್ಯ ಅಪರಾಧ ದತ್ತಾಂಶ ವಿಭಾಗದ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2010ನೇ ಸಾಲಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು 2011ರಲ್ಲಿ ವಿವಾಹವಾಗಿದ್ದರು. ಕೊಡಗು, ಧಾರವಾಡ ಹಾಗೂ ಹುಬ್ಬಳ್ಳಿಯ ಎಸ್ಪಿ ಆಗಿ, ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿರುವ ಇವರು, ಮಹಾರಾಷ್ಟ್ರ ಮೂಲದ 2009 ನೇ ಬ್ಯಾಚ್ ನ ಐಎಫ್ಎಸ್ ( ಫಾರಿನ್ ಸರ್ವೀಸ್ ) ಅಧಿಕಾರಿ ನಿತೀನ್ ಸುಭಾಸ್ ಅವರನ್ನು ಪ್ರೀತಿಸಿ 2011 ರಲ್ಲಿ ಮದುವೆಯಾಗಿದ್ದರು, ನಿತಿನ್ ಕೊಲಂಬೋ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ್ದರು.