ಕುಮಟಾ: ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರದಲ್ಲಿ ನಿರಂತರವಾಗಿ ಮಳೆಯಾದ ಪರಿಣಾಮ ಅಘನಾಶಿನಿಗೆ ನದಿಯ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಇದರ ಪರಿಣಾಮ ಕುಮಟಾ ತಾಲ್ಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ.
ಕುಮಟಾದ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಛತ್ತ ನಕುರ್ವೆ, ತಾರಿಭಾಗಿಲ್,ಕೈರೆ,ಕಲ್ಮಟ್ಟೆ, ಭಾಗದಲ್ಲಿ ಅಘನಾಶಿನಿ ನದಿಯ ನೀರು ಜನವಸತಿ ಪ್ರದೇಶಗಳತ್ತ ಆವರಿಸಿದೆ.ನದಿಯ ಪ್ರವಾಹದಿಂದ ಜನರ ಆಸ್ತಿ ಪಾಸ್ತಿ ಗಳಿಗೆ ಅಪಾರ ಹಾನಿ ಸಂಭವಿಸಿದೆ. ಪ್ರವಾಹ ಪೀಡಿತ ಜನರು ತಮ್ಮ ಮನೆ ಬಿಟ್ಟು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಜನರ ಸಮಸ್ಯೆ ಗಳಿಗೆ ಸ್ಪಂದಿಸುವ ಉದ್ದೇಶ ದಿಂದ ಜಿ.ಪಂ ನಿಕಟಪೂರ್ವ ಸದಸ್ಯರಾದ ಪ್ರದೀಪ ನಾಯಕ ದೇವರಭಾವಿ ಅವರು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳ ಜೊತೆ ಮಾತನಾಡಿ ಹಾನಿಯನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು. ಜನರಿಗೆ ಸಾಂತ್ವನ ಮಾಡಿ ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಭರವಸೆ
ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ವರ ಪಟಗಾರ, ಪರಸು ,ವಿನಾಯಕ ನಾಯಕ, ಮಂಜುನಾಥ ಹರಿಕಾಂತ, ಮಂಜುನಾಥ ಮರಾಠಿ, ನಾಗರಾಜ ನಾಯ್ಕ್,ಚಿನ್ನು ಅಂಬಿಗ,ಗಣೇಶ ಅಂಬಿಗ ಗದ್ದೆಮನೆ, ಚಂದ್ರು ಅಂಬಿಗ,ಉಮೇಶ ಅಂಬಿಗ, ಪಾಂಡು ಪಟಗಾರ, ರವಿ ಪಟಗಾರ, ಮೈಮುನಾ ಶೇಖ್ ಹಾಗೂ ಊರ ನಾಗರಿಕರು ಇದ್ದರು.