Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ನ್ಯೂಟ್ರಿಷನ್ ಕಿಟ್ ವಿತರಣೆ

ಕುಮಟಾ: ಪುರಭವನದಲ್ಲಿ  ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ನ್ಯೂಟ್ರಿಷನ್ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ದಿನಕರ ಶೆಟ್ಟಿ ಕಿಟ್ ಹಸ್ತಾಂತರ ಮಾಡಿದರು. ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರ ಕರೋನಾ ಕೋವಿಡ್ ನಿಯಂತ್ರಣಕ್ಕೆ ತರಲು ಸಾಕಷ್ಟು ಉತ್ತಮವಾದ ವೈಧ್ಯಕೀಯ ಚಿಕಿತ್ಸೆಯನ್ನು ನೀಡಿದೆ.
 ಇನ್ನು ರೋಗ ನಿರೋಧಕ ಶಕ್ತಿವೃದ್ದಿಯಾಗಲು  ಅಪೌಷ್ಠಿಕತೆಯ ಮಕ್ಕಳಿಗೆ ಪೌಷ್ಠಿಕತೆಯನ್ನು ಸುಧಾರಿಸುವ  ಕಲ್ಪನೆಯು ನಮ್ಮ ಸರ್ಕಾರಕ್ಕೆ ಇನ್ನು ಬರಲಿಲ್ಲವಾಗಿತ್ತು, ಆದರೆ ನಿಟ್ಟಿನಲ್ಲಿ ಪ್ರೀನ್ಸ್ ಗ್ರೂಪ್ ಹುಬ್ಬಳ್ಳಿಯ ಕುಮಟಾದ ಹಿರೆಗುತ್ತಿ ಮೂಲದ ಪ್ರಕಾಶ ನಾಯಕ ಅವರು ನ್ಯೂಟ್ರಿಷನ್ ಕಿಟ್ ಅನ್ನು ವಿತರಣೆ ಮಾಡಿದ್ದಾರೆ, ವ್ಯವಹಾರ ಜೋತೆಗೆ ಸಮಾಜಿಕ ಕಳಕಳಿಯನ್ನು ಹೊಂದಿರುವುದು ನೀಜಕ್ಕೂ ಶ್ಲಾಘನೆಯ ಎಂದು ಅಭಿಪ್ರಾಯ ಪಟ್ಟರು.

ನಂತರ ಮಾತನಾಡಿದ  ಪ್ರೀನ್ಸ್ ಗ್ರೂಪ್ ಹುಬ್ಬಳ್ಳಿಯ ಪ್ರಕಾಶ ನಾಯಕ ಅವರು ಮಾತನಾಡಿ ಕರೋನಾ ಕೋವಿಡ್‌ದಂತಹ ಸಂದರ್ಭದಲ್ಲಿ ನಾನು ಹುಟ್ಟಿಬೆಳೆದ ಊರಿನ ಜನರಿಗೆ ನೆರವಾಗಬೇಕು ಎನ್ನುವ ದೃಷ್ಠಿಯಿಂದ ಸಹಾಯ ಹಸ್ತವನ್ನು ಚಾಚುತ್ತಾ ಬಂದಿದ್ದೇನೆ ,ಇನ್ನು ಅಪೌಷ್ಠಿಕ ಮಕ್ಕಳ ಆರೋಗ್ಯದ ಸ್ಥಿತಿಗತಿ ಸುಧಾರಿಸಿ ಪೌಷ್ಠಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ನ್ಯೂಟ್ರಿಷನ್ ಕಿಟ್ ಅನ್ನು ನೀಡಿದ್ದೇನೆ ಎಂದು ಹೇಳಿದರು.
ಕುಮಟಾ ಸಿಡಿಪಿಓ ನಾಗರತ್ನಾ ನಾಯಕ, ಇದ್ದರು.