Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ರಾಷ್ಟ್ರ ಮಟ್ಟದ 'ನಿಮ್ಹಾನ್ಸ್' ಪ್ರವೇಶ ಪರೀಕ್ಷೆ , ಡಾ.ಸುಮಂತ ಬಳಗಂಡಿ "ಫಸ್ಟ್ ರ್ಯಾಂಕ್"

ಕುಮಟಾ: ಸ್ವಾಯತ್ತ ವಿಶ್ವವಿದ್ಯಾಲಯ  ಮತ್ತು
ಭಾರತದ ಸಂಸತ್ತಿನ ಕಾಯ್ದೆಯ ಮೂಲಕ ಮಹತ್ವದ ಸಂಸ್ಥೆಯೆಂದು ಘೋಷಿಸಲ್ಪಟ್ಟ
ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಲ್ಲಿ  ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ "ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ" (NIMHANS) ಜುಲೈ 14 ರಂದು ನಡೆಸಿದ ರಾಷ್ಟ್ರ ಮಟ್ಟದ "ಪ್ರವೇಶ ಪರೀಕ್ಷೆ" ಯಲ್ಲಿ ಡಾ.ಸುಮಂತ ಬಳಗಂಡಿ ಅವರು ಪ್ರಥಮ ರ್ಯಾಂಕ್ (First Rank) ಪಡೆದು ಡಿ.ಎಮ್.(Doctorate of Medicine- Neurology)ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಾ ಸಾರ್ವಜನಿಕ ಸರಕಾರೀ ಆಸ್ಪತ್ರೆಯಲ್ಲಿ 'ಫಿಸಿಶಿಯನ್' ಆಗಿ ಸೇವೆ ಸಲ್ಲಿಸುತ್ತಿರುವ ಇವರು ,ಮೂಲತಃ  ಶಿರಸಿ ತಾಲೂಕು ಮುಂಡಿಗೇಸರದವರಾಗಿದ್ದು ,
ಹಾಲಿ ಕುಮಟಾದಲ್ಲಿ ನೆಲೆಸಿರುವ ಸ್ವಾತಿ ಮತ್ತು ಜಯದೇವ ಬಳಗಂಡಿಯವರ ಸುಪುತ್ರರಾಗಿದ್ದಾರೆ.

ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪ್ರತಿಷ್ಠಿತ 'ನಿಮ್ಹಾನ್ಸ್' ಸಂಸ್ಥೆಯಲ್ಲಿ ಮೂರು ವರ್ಷಗಳ ಅವಧಿಯ "ನ್ಯೂರೋಲೋಜಿ-ಸೂಪರ್ ಸ್ಪೆಶಲೈಸೇಶನ್" ಅಧ್ಯಯನ ಕ್ಕೆ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದ ಐವರು ವೈದ್ಯರು ಗಳಿಗೆ ಮಾತ್ರ ಈ ಬಾರಿ ಅವಕಾಶವಿದ್ದು ಈ ಐದು ಸ್ಥಾನಗಳಿಗಾಗಿ ವಿವಿಧ ರಾಜ್ಯಗಳ ಸಾವಿರಾರು ವೈದ್ಯರುಗಳು ಹಾಜರಾಗಿ ಪರೀಕ್ಷೆ ಎದುರಿಸಿದ್ದರು.

ಪ್ರಥಮ ಯತ್ನದಲ್ಲೇ ಪ್ರಥಮ ರ್ಯಾಂಕ್ ಪಡೆದು ಆಯ್ಕೆಯಾದ ಡಾ.ಸುಮಂತ ಬಳಗಂಡಿ ಅವರು  ಕಿಮ್ಸ್  ಹುಬ್ಬಳ್ಳಿಯಲ್ಲಿ MBBS ಮತ್ತು MD (ಜನರಲ್ ಮೆಡಿಸಿನ್) ಅಭ್ಯಸಿಸಿ ಪದವಿ ಪಡೆದಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಬೋರ್ಡ್ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ  MD ಗೆ ತತ್ಸಮಾನವಾಗಿರುವ DNB(ಜನರಲ್ ಮೆಡಿಸಿನ್) ಪದವಿ ಪ್ರಮಾಣಪತ್ರವನ್ನೂ ಇತ್ತೀಚೆಗಷ್ಟೇ ಪಡೆದಿರುತ್ತಾರೆ.

ಈ ಸಾಧನೆಗೆ ಅವರ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು, ಅಭಿನಂದನೆ ಸಲ್ಲಿಸಿದ್ದು ಮುಂದೆಯೂ ಸಹ ಅವರ ಓದು ಯಶಸ್ವಿಯಾಗಿ, ಅವರ ಸೇವೆ ಸಮಸ್ತರಿಗೂ ಸಿಗುವಂತಾಗಿ,  ಎಂದು ಶುಭ ಹಾರೈಸಿದ್ದಾರೆ.