ಕುಮಟಾ:ಕರೋನಾ ಕೋವಿಡ್ ನಿಯಂತ್ರಣದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಆಳ್ವಾ ಪೌಂಡೇಶನ ವತಿಯಿಂದ ಆರೋಗ್ಯ ಕಿಟ್, ಅನ್ನು ವಿತರಣೆ ಕಾರ್ಯಕ್ರಮವನ್ನು ಕುಮಟಾದ ಹಳೆಯ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೋಳ್ಳಲಾಗಿತ್ತು.
ಈ ವೇಳೆ ಕುಮಟಾ ತಾಲೂಕಾ ಆರೋಗ್ಯಾಧಿಕಾರಿ ಆಜ್ಞಾ ನಾಯಕ ಮಾತನಾಡಿ ಆಶಾಕಾಯಕರ್ತೆಯರ ಸೇವೆಯನ್ನು ಗುರುತಿಸಿ ಅವರಿಗೆ ಗೌರವಿಸಿ ಸ್ಪೂರ್ತಿ ತುಂಬಲು ಪ್ರೇರಣೆ ನೀಡಿದ್ದಾರೆ. ನಮ್ಮ ತಾಲೂಕಿನನಲ್ಲಿ ಕರೋನಾ ಸೋಂಕು ಸಂಪೂರ್ಣವಾಗಿ ನಿವಾರಣೆ ಆಗಿ ನಿಶ್ಚಿಚಿಂತೆಯಿಂದ ಒಡಾಡಲು ಮೂರರಿಂದ ನಾಲ್ಕು ತಿಂಗಳು ಕಾಲ ಆಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಶಿವಾನಂದ ಹೆಗಡೆ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಆರ್.ಎಚ್.ನಾಯ್ಕ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ,ನಾಗೇಶ ನಾಯ್ಕ, ಸತೀಶ ನಾಯ್ಕ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.