ಹೊನ್ನಾವರ: ತಾಲೂಕಿನ ಕೆಳಗಿನೂರಿನ ಯುವತಿ ಶೆರೋನಾ ಥಾಮಸ್ ಹೊರ್ಟಾ ಇವರು ಮಂಡಿಸಿದ 'ಇನ್ವೆಸ್ಟಿಗೇಷನ್ ಆಫ್ ನ್ಯಾನೋಸ್ಕೇಲ್ ಕ್ರಿಸ್ಟಲೋಗ್ರಾಫಿಕ್ ಪೇಸಸ್ & ಎಲೆಕ್ಟ್ರಾನಿಕ್ ಪ್ರೊಪರ್ಟಿಸ್ ಸ್ಪೈನಲ್ & ಅಲಾಯ್' ಎಂಬ ಮಹಾಪ್ರಬಂಧಕ್ಕಾಗಿ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಪಿಕ್ ರಿಸರ್ಚ್ ಬೆಂಗಳೂರು ಇವರು ಒಂದನೇ ತಾರೀಕಿನನಂದು ಡಾಕ್ಟರೇಟ್ ನೀಡಿದ್ದಾರೆ.
ಜೆ ಎನ್ ಸಿ ಎ ಎ ಆರ್ ಬೆಂಗಳೂರು ಇಲ್ಲಿ ಡಾ|| ರಂಜನ್ ದತ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿರುತ್ತಾರೆ
ಈ ಯುವತಿ ಹೊನ್ನಾವರದ ಕೆಳಗಿನೂರಿನವಳಾಗಿದ್ದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾಗಿರುವ ಥಾಮಸ್ ಹಾಗೂ ಶ್ರೀಮತಿ ಮೇಬಲ್ ಹೊರ್ಟಾರ ಮಗಳಾಗಿದ್ದು
ತನ್ನ ಆರಂಭಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣ ವನ್ನು ಬಿಎಸ್ಸಿ ಪದವಿಯನ್ನು ಹೊನ್ನಾವರದ ಎಸ್ ಡಿ ಎಂ ಕಾಲೇಜಿನಲ್ಲಿ ಕಾಲೇಜಿಗೆ ಪ್ರಥಮ ಹಾಗೂ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ಸ್ಥಾನ ಪಡೆಯುವುದರ ಮೂಲಕ ಪದವಿ ಯನ್ನೂ ಮುಗಿಸಿರುತ್ತಾರೆ.
ಭೌತಶಾಸ್ತ್ರದಲ್ಲಿ ಎಂಎಸ್ಸಿಯನ್ನು ಕೆ. ಯು. ಡಿ (ಕರ್ನಾಟಕ ಯುನಿವರ್ಸಿಟಿ ಧಾರವಾಡ)ದಲ್ಲಿ ಚಿನ್ನದ ಪದಕದೊಂದಿಗೆ ಮುಗಿಸಿರುತ್ತಾರೆ.
ಅದಾದ ನಂತರ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆಯನ್ನು ಪಾಸ್ ಮಾಡಿ ಐ.ಐ. ಎಸ್ಸಿ ಬೆಂಗಳೂರಿನಲ್ಲಿ ಒಂದು ವರ್ಷದ ಕೋರ್ಸ್ ಅನ್ನು ಎ ಗ್ರೇಡ್ ನೊಂದಿಗೆ ಮುಗಿಸಿರುವ ಈಕೆ ಓದಿನಲ್ಲಿಯು ಪ್ರತಿಭಾವಂತೆ.