ಕುಮಟಾ : ಪಟ್ಟಣದಿಂದ ಸುಮಾರು 18 ರಿಂದ 20 ಕಿ.ಮಿ ದೂರದಲ್ಲಿರುವ ಕತಗಾಲ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಅಂಬುಲೆನ್ಸ್ ಅನ್ನು ಶಾಸಕ ದಿನಕರ ಶೆಟ್ಟಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರಾಥಮಿಕ ಆರೋಗ್ಯಕ್ಕೆ ಅಂಬುಲೆನ್ಸ್ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಕತಗಾಲ ಹಾಗೂ ದೂರದ ಯಾಣದ ಗುಡ್ಡಗಾಡು ಪ್ರದೇಶ ಹಾಗೂ ಪಟ್ಟಣದಿಂದ ದೂರ ಇರುವ ಕಾರಣ ಈ ಪ್ರದೇಶದ ಜನರಿಗೆ ಅನಾರೋಗ್ಯ ದಂತಹ ಸಮಸ್ಯೆಗಳು ಎದುರಾದರೆ ಜನರಿಗೆ ತುರ್ತು ಸಂದರ್ಭಗಳಲ್ಲಿ ಉಪಯೋಗವಾಗುವಂತೆ ಅಂಬುಲೆನ್ಸ್ ಅನ್ನು ನೀಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರ ಸಹಕಾರದಿಂದ ಕುಮಟಾ ಹಾಗೂ ಹೊನ್ನಾವರ ಕ್ಷೇತ್ರಕ್ಕೆ 2 ಆಂಬುಲೆನ್ಸ್ ನೀಡಿದ್ದಾರೆ. ಕುಮಟಾ ತಾಲೂಕಿನ ಗುಡ್ಡ-ಕಾಡು ಪ್ರದೇಶ ಕತಗಾಲ ಭಾಗಕ್ಕೆ ಆಂಬುಲೆನ್ಸ್ ಹಸ್ತಾಂತರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಿರಿ ಎಂದು ಶಾಸಕರಾದ ದಿನಕರ ಶೆಟ್ಟಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಕುಮಟಾ ಮಂಡಲದ ಅಧ್ಯಕ್ಷರಾದ ಹೇಮಂತ್ ಗಾಂವ್ಕರ್,ತಾಲೂಕ ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ , ಮಾಜಿ ಜಿ ಪಂ ಸದಸ್ಯರಾದ ಗಜಾನನ ಪೈ, ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರಪ್ರಭ ನಾಯಕ್ ,ಅಲ್ಕೋಡ ಗ್ರಾಂ ಪಂ ಅಧ್ಯಕ್ಷರಾದ ಶ್ರೀಮತಿ ಕೇಸರಿ ಜೈನ,ಉಪಾಧ್ಯಕ್ಷರಾದ ಶ್ರೀಧರ್ ಪೈ, ವಿಶ್ವನಾಥ್ ನಾಯ್ಕ ಮತ್ತಿತರರು ಉಸ್ಥಿತರಿದ್ದರು.