Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯ | . ಕೆಲಸಕ್ಕೆ ಹೋದ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಕಾದಿತ್ತು ಆಘಾತ


ಹೊನ್ನಾವರ : ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದ  ಘಟನೆ ಹೊನ್ನಾವರ ಪಟ್ಟಣದ ಚರ್ಚ್ ರಸ್ತೆಯಲ್ಲಿ ನಡೆದಿದೆ. ಅಣ್ಣ ತಮ್ಮನ ನಡುವಿನ ಸಣ್ಣ ಜಗಳವೇ ದೊಡ್ಡದಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಹೊನ್ನಾವರದಲ್ಲಿ ನಡೆದಿರುವ ಈ ಘಟನೆ  ಜನರನ್ನೇ ಬೆಚ್ಚಿ ಬೀಳಿಸಿದೆ.


ಸಣ್ಣ ವಿಷಯಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು. ಅಣ್ಣ ಕೆಲಸಕ್ಕೆ ಹೋಗುವುದಿಲ್ಲ, ಮನೆಯನ್ನು ನಾನೊಬ್ಬನೆ ನಿಭಾಯಿಸಬೇಕು. ನಾನೊಬ್ಬನೇ ದುಡಿಯಬೇಕು ಎಂಬ ವಿಷಯಕ್ಕೆ ಜಗಳವಾಗಿದೆ. ಇದೀಗ ಈ ಜಗಳ ಸಾವಿನಲ್ಲಿ ಅಂತ್ಯಕಂಡಿದೆ.

ಕೊಲೆಯಾದ ವ್ಯಕ್ತಿ, ಅರ್ಜುನ ಶಂಕರ ಮೇಸ್ತ. ಅಣ್ಣ ಕೃಷ್ಣ ಶಂಕರ ಮೇಸ್ತ ಸಾಯಿಸಿದ ಆರೋಪಿ. ಅಣ್ಣ ತಮ್ಮನನನ್ನು ಸಾಯಿಸಿ ಮಾಡಿ ಬೆಡ್ ಸೀಟ್ ನಿಂದ ಮುಚ್ಚಿ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿದ್ದಾನೆ ‌ಎನ್ನಲಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಕೆಲಸಕ್ಕೆ ಹೋದ ತಾಯಿ ಕೆಲಸ ಮುಗಿಸಿ ಮನೆಗೆ ಬಂದು ಕಾದು ಕಾದು ಬಳಿಕ ಬೀಗ ಓಡೆದು ಒಳಗೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ತಾಯಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ತಲೆ ಮರೆಸಿಕೊಂಡ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.