ಹೊನ್ನಾವರ: ಕರ್ಕಿ ತೊಪ್ಪಲಕೇರಿ ಮನೆಯೊಂದರಲ್ಲಿ ಚಿನ್ನದ ನಕ್ಲೇಸ್ ಹಾಗೂ 10 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಈ ಸಂಬoಧ ಜೂನ್ 29 ರಂದು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈ ಪ್ರಕರಣ ದಾಖಲಾದ ಒಂದೇ ದಿನದೊಳಗೆ ಆರೋಪಿಯನ್ನು ಬಂಧಿಸಿ ಕಳ್ಳತನವಾದ ಚಿನ್ನದ ನಕ್ಲೇಸ್ ಜಪ್ತಿಪಡಿಸಿ ಕೊಳ್ಳಲು ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರು ಅತಿ ಶೀಘ್ರದಲ್ಲಿ ಆರೋಪಿಯನ್ನು ಪತ್ತೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಬಂಧಿತ ಆರೋಪಿಯನ್ನು ಹಾನಗಲ್ ನ ಸಚಿನ್ ಎಂದು ಗುರುತಿಸಲಾಗಿದೆ. ಈತನ್ನು ದಸ್ತಗಿರಿ ಮಾಡಿದ್ದು ಆರೋಪಿತನಿಂದ 18 ಗ್ರಾಂ ತೂಕದ ಅಂದಾಜು 82 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನಕ್ಲೇಸ್ ನ್ನು ಜಪ್ತುಪಡಿಸಿಕೊಂಡು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕರು ಭಟ್ಕಳ ಉಪ ವಿಭಾಗ ಭಟ್ಕಳ ಇವರ ಬೆಳ್ಳಿಯಪ್ಪ ಕೆ.ಯು., ಮಾರ್ಗದರ್ಶನದಲ್ಲಿ ಶ್ರೀಧರ್ ಎಸ್.ಆರ್ ಸಿ.ಪಿ.ಐ ಹೊನ್ನಾವರ ವೃತ್ತ ಇವರ ನೇತೃತ್ವದಲ್ಲಿ ಹೊನ್ನಾವರ ಠಾಣೆಯ ಪಿ.ಎಸ್.ಐ ರವರಾದ ಸಾವಿತ್ರಿ ನಾಯಕ ಪಿ.ಎಸ್.ಐ ಕ್ರೈಂ, ಶಶಿಕುಮಾರ ಪಿ.ಎಸ್.ಐ ಕಾ&ಸು-1, ಮಹಾಂತೇಶ ನಾಯಕ ಪಿ.ಎಸ್.ಐ ಕಾ&ಸು -2, ಶಾಂತಿನಾಥ್ ಪ್ರೊ.ಪಿ.ಎಸ್.ಐ ಹಾಗೂ ಪೊಲೀಸ್ ಸಿಬ್ಬಂದಿಯವರಾದ ರಮೇಶ ಲಮಾಣಿ ಸಿ.ಎಚ್.ಸಿ, ಕೃಷ್ಣ ಗೌಡ ಸಿ.ಎಚ್.ಸಿ, ಮಹಾವೀರ ಸಿ.ಪಿ.ಸಿ, ರಯೀಸ್ ಭಗವಾನ್ ಸಿಪಿಸಿ ಇವರು ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.